ಸಕಲೇಶಪುರ : ಕಸಬಾ ಹೋಬಳಿಯ ಹೆಬ್ಬಾಸಾಲೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವಕುಮಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಹೊಸ ಅಧ್ಯಕ್ಷೆ ಶಿವಕುಮಾರಿ , ಮಾಜಿ ಅಧ್ಯಕ್ಷ ಮಹೇಶ್ ಹಾಗೂ ಇತರ ಸದಸ್ಯರನ್ನ ಶಾಸಕರಾದ ಸಿಮೆಂಟ್ ಮಂಜು ರವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮುಖಂಡ ರಘು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ ಸಂಘ್ವಿ, ಲಯನ್ಸ್ ಮಾಜಿ ಅಧ್ಯಕ್ಷ ರವಿಶಂಕರ್, ಲೋಹಿತ್ ಕೌಡಹಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಾಂತ ರವಿ, ಭಾಗ್ಯ, ನೇತ್ರಾವತಿ ಮೇಘರಾಜ್, ರಾಜಕುಮಾರ್ ಕ್ಯಾಮನಹಳ್ಳಿ, ವಾಸು ಇತರರು ಇದ್ದರು.