ಸಕಲೇಶಪುರ : ತಾಲ್ಲೂಕಿನ ಪಟ್ಟಣದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿ ಸಂಪೂರ್ಣವಾಗದೆ , ಈ ರಸ್ತೆಯಲ್ಲಿ ತಿರುಗಾಡುವ ಪ್ರಯಾಣಿಕರು ಪ್ರತಿದಿನ ಹಿಡಿ ಶಾಪ ಹಾಕಿಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ.
ಇಂದು ಶನಿವಾರ ಆದ ಕಾರಣ ನಾಳೆ ಬಾನುವಾರ ಮತ್ತು ಅಕ್ಟೋಬರ್ 2 ಸೋಮವಾರ ಗಾಂದಿ ಜಯಂತಿ ಈಗೆ ಸಾಲು ಸಾಲು ರಜೆಗಳಿಂದಾಗಿ ಬೆಂಗಳೂರಿನಿಂದ ಮಂಗಳೂರಿಗೆ ಹಾಗೂ ಧರ್ಮಸ್ಥಳ ,ಸುಬ್ರಹ್ಮಣ್ಯಕ್ಕೆ ಹೋಗುವವರ ಸಂಖ್ಯೆ ಹೆಚ್ಚಾದ ಕಾರಣ ಟ್ರಾಫಿಕ್ ಸಮಸ್ಯೆಯಿಂದ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂತು.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಂಡಿ ಬಿದ್ದಿರುವ ರಸ್ತೆಗಳು ಈಗ ನೀರು ತುಂಬಿಕೊಂಡು ವಾಹನ ಚಾಲಕರಿಗೆ ಸಮಸ್ಯೆಯನ್ನು ತಂದೊಡ್ಡಿದೆ, ಪ್ರತಿದಿನ ಈ ರಾಷ್ಟ್ರೀಯ ಹೆದ್ದಾರಿಯ 75 ರಲ್ಲಿ ಸಾವಿರಾರು ಮಂದಿ ಪ್ರಯಾಣಿಕರು ಸಂಚಾರ ಮಾಡುತ್ತಾರೆ, ಆದರೆ ಈ ರಸ್ತೆಯ ಕಾಮಗಾರಿ ಸದ್ಯಕ್ಕೆ ಮುಗಿಯದೆ ಇರುವುದು ಪ್ರತಿದಿನ ಈ ರಸ್ತೆಯಲ್ಲಿ ಚಲಿಸುವ ಪ್ರಯಾಣಿಕರು ಸರಿಯಾದ ಸಮಯಕ್ಕೆ ತಾವು ತಲುಪಬೇಕಾದ ಸ್ಥಳಕ್ಕೆ ತಲುಪದೇ ಟ್ರಾಫಿಕ್ ಸಮಸ್ಯೆಯಿಂದಾಗಿ ಶಾಪ ಹಾಕಿ ಹೋಗುವಂತಹ ಪರಿಸ್ಥಿತಿ ಎದುರಾಗಿದೆ.
ಇಂದು ಈ ಸಮಸ್ಯೆ ಅತ್ಯಂತ ದೊಡ್ಡ ಮಟ್ಟದಲ್ಲಿ ಪ್ರಯಾಣಿಕರಿಗೆ ಸಮಸ್ಯೆ ತಂದೊಡ್ಡಿತು.ಕಾರಣ ಒಂದು ಕಡೆ ಮಳೆ ಹಾಗೂ ತಿಂಗಳ ಹಾಗೂ ವಾರದ ಕೊನೆಯ ದಿನವಾಗಿರುವುದರಿಂದ ಈ ದಿನ ಊರಿಗೆ ಬರುವ ಹಾಗೂ ದೇವಸ್ಥಾನಗಳಿಗೆ ಹೋಗುವ ಜನರು ಈ ರಾಷ್ಟ್ರೀಯ ಹೆದ್ದಾರಿಯನ್ನೇ ಅವಲಂಬಿಸಿರುತ್ತಾರೆ. ಆದರೆ ಇಂದು ಬೆಳಗ್ಗೆ 10 ಗಂಟೆಯಿಂದಲೇ ವಾಹನಗಳು ಟ್ರಾಫಿಕ್ ಸಮಸ್ಯೆಗೆ ಕಾರಣವಾಯಿತು.
ವಾಹನಗಳು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಉಂಟಾಗಿತ್ತು.ಕೌಡಳ್ಳಿ ಸಮೀಪ ಇರುವ ರಸ್ತೆಯಲ್ಲಿ ಗುಂಡಿಗಳು ಹಾಗೂ ಸೇತುವೆಯ ಬಳಿ ಇರುವ ನೀರು ತುಂಬಿದ ಗುಂಡಿಗಳಿಂದ ವಾಹನ ಚಾಲಕರು ಈ ರಸ್ತೆಯಲ್ಲಿ ಚಲಿಸುವುದಕ್ಕೆ ಗಂಟೆಗಟ್ಟಲೆ ಹರಸಹಾಸ ಪಡುವಂತಹ ಪರಿಸ್ಥಿತಿ ಉಂಟಾಯಿತು. ಜೊತೆಗೆ ಸಾಲುಗಟ್ಟಿ ನಿಂತ ಪ್ರಯಾಣಿಕರು ತಮ್ಮ ದೂರದ ಊರಿಗೆ ಸರಿಯಾದ ಸಮಯಕ್ಕೆ ಬಸ್ಸನ್ನು ಹಿಡಿದು ಹೋಗಲು ಆಗದೆ ಸಮಸ್ಯೆಯನ್ನು ಎದುರಿಸುವಂತಹ ಪರಿಸ್ಥಿತಿ ಉಂಟಾಯಿತು.
ಇಷ್ಟೆಲ್ಲಾ ಸಮಸ್ಯೆಗಳು ಮೊದಲಿನಿಂದಲೂ ಗೊತ್ತಿದ್ದರೂ ಕೂಡ ಕಾಮಗಾರಿಯನ್ನು ಸಂಪೂರ್ಣವಾಗಿ ಮಾಡದೆ ಪ್ರಯಾಣಿಕರಿಗೆ ಸಮಸ್ಯೆಯನ್ನು ತಂದೊಡ್ಡಿರುವ ಕಾಮಗಾರಿಗೆ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಉಸ್ತುವಾರಿಗಳು ಹಾಗೂ ಜಿಲ್ಲಾ ಕರವೇ ಕಾರ್ಯದರ್ಶಿ ಗಳಾದ ರಘು ಪಾಳ್ಯ ಅವರು ತೀವ್ರ ಬೇಸರ ವ್ಯಕ್ತಪಡಿಸುವುದರ ಜೊತೆಗೆ. ಆದಷ್ಟು ಬೇಗ ಈ ಕಾಮಗಾರಿಯನ್ನು ಮುಗಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದರೆ ಸಂಘಟನೆಯ ಮೂಲಕ ಪ್ರತಿಭಟನೆಯ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ .
ಪ್ರತಿದಿನ ಈ ರಸ್ತೆಯಲ್ಲಿ ಹೋಗುವ ಜನರು, ರೋಗಿಗಳು ವೃದ್ಧರು ರಸ್ತೆಯ ವ್ಯವಸ್ಥೆಗೆ ಹಿಡಿಶಾಪ ಹಾಕಿಕೊಂಡು ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸುವ ಮೂಲಕ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ವಾಹನಗಳ ಚಾಲಕರಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.