ಸಕಲೇಶಪುರ:-ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಬೆಳೆಗಾರ ಸಂಘದ 6ನೇ ಮಾಸಿಕ ಸಭೆಯನ್ನು ಅಧ್ಯಕ್ಷರಾದ ಎಂ. ಕೆ ದರ್ಶನ್ ಅವರ ಅಧ್ಯಕ್ಷತೆಯಲ್ಲಿ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಬೆಳೆಗಾರ ಸಂಘದ ಕಚೇರಿಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ವಳಲಹಳ್ಳಿ ಗ್ರಾಮ ಪಂಚಾಯತಿ ಶ್ರೀ ಮಲ್ಲೇಶ್ವರ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಪಡೆದ ಸಾನಿಕ,ಲತಿಕಾ.ವಿ, ನಿತೇಶ್ ಬಿ.ಎಸ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ಹಾಗೂ ಕಝಾಕಿಸ್ತಾನ್ ದಲ್ಲಿ ನಡೆದ ಏಷ್ಯನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕರಡಿಗಾಲ ಗ್ರಾಮದ ಮಾಜಿ ಸೈನಿಕ ಕೆ.ಜಿ ಧರ್ಮರಾಜ್ ಹಾಗೂ ರಮ್ಯಾ ದಂಪತಿಗಳ ಇಬ್ಬರು ಮಕ್ಕಳಾದ ಭಗತ್ ಗೌಡ ಹಾಗೂ ವಿದ್ಯುತ್ ಗೌಡ ಅವರ ಸಾಧನೆಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹೆಚ್. ಡಿ. ಪಿ. ಎ ಮಾಜಿ ಸಂಘಟನ ಕಾರ್ಯದರ್ಶಿ ಕೆ. ಪಿ ಕೃಷ್ಣಗೌಡ ಸೇರಿದಂತೆ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಎಲ್ಲಾ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ 6ನೇ ಮಾಸಿಕ ಸಭೆಯನ್ನು ಯಶಸ್ವಿಗೊಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *