
ಸಕಲೇಶಪುರ : ಪೌರ ನೌಕರರು ತಮ್ಮೆಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿರುವ ಕಾರ್ಮಿಕರು ರಾಜ್ಯ ಸರ್ಕಾರ ನೌಕರರ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರ ವಾಪಸ್ಸು ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಪುರಸಭಾ ವ್ಯಾಪ್ತಿಯಲ್ಲಿಸ್ವಚ್ಛತಾ ಕಾರ್ಯ ಸೇರಿದಂತೆ ಯಾವುದೇ ಕೆಲಸ ಮಾಡದೆ ಪುರಸಭಾ ಮುಂಭಾಗ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಓ ನಟರಾಜ್, ನಾವು ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದರೂ ಖಾಯಂ ಉದ್ಯೋಗ, ಸಮಾನ ವೇತನ, ಜಿಪಿಎಫ್, ಆರೋಗ್ಯ ಸೌಲಭ್ಯಗಳಂತಹ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದೇವೆ. ಕರ್ನಾಟಕ ನಾಗರಿಕ ಸೇವಾ ನಿಯಮ 1976 ಅನ್ನು ಪೌರ ನೌಕರರಿಗೆ ಅನ್ವಯಿಸಬೇಕು. ಜಿಪಿಎಫ್, ಕೆಜಿಐಡಿ, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರಿಗೆ ಲಭಿಸುವ ಸೌಲಭ್ಯಗಳನ್ನು ವಿಸ್ತರಿಸಬೇಕು. ನಾವು ನಿರಂತರವಾಗಿ ನೇರ ಪಾವತಿಗೆ ಒಳಪಡುವಂತೆ ಆಗ್ರಹಿಸುತ್ತಿದ್ದೇವೆ. ನೇಮಕಾತಿ, ವೇತನ ಸಮಾನತೆ, ಹಾಗೂ ಶಾಶ್ವತ ಹುದ್ದೆಗಳ ಮಂಜೂರಾತಿಯೂ ನಮ್ಮಮುಖ್ಯ ಬೇಡಿಕೆಗಳಲ್ಲಿವೆ ಎಂದರು.
ಮೃತ ನೌಕರರ ಕುಟುಂಬಕ್ಕೆ ಪರಿಹಾರ ಹಾಗೂ ಗೃಹಭಾಗ್ಯ ಯೋಜನೆಯ ವಿಸ್ತರಣೆಯು ಸಹ ತುರ್ತು ಅಗತ್ಯವಾಗಿದೆ. ಸರ್ಕಾರ ಈ ಎಲ್ಲ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.ಪುರಸಭಾ ಅಧ್ಯಕ್ಷ ಜ್ಯೋತಿ ರಾಜಕುಮಾರ್ ಮಾತನಾಡಿ, ಪೌರ ಕಾರ್ಮಿಕರ ದೀರ್ಘ ಹೋರಾಟಪೌರ ಕಾರ್ಮಿಕರು ಕಳೆದ ನಾಲ್ಕು ವರ್ಷಗಳಿಂದ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಈ ಬೇಡಿಕೆಗಳನ್ನು ಶೀಘ್ರವಾಗಿ ಪರಿಗಣಿಸಿ, ಕಾನೂನಾತ್ಮಕವಾಗಿ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಪ್ರಕಾಶ್, ವ್ಯವಸ್ಥಾಪಕ ಮಹೇಶ್, ಸಿಇಒ ನಟರಾಜ್,ಎಸ್.ಡಿ.ಎ.ಶ್ರೀನಿವಾಸ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸೋಮಶೇಖರ್, ಸಿಬ್ಬಂದಿಗಳಾದ ಗಂಗಾಧರ್, ವರದರಾಜ್, ರೇವಣ್ಣ, ಚಂದ್ರಣ್ಣ, ನಾಸಿರ್, ಮತ್ತು ಇತರರು ಉಪಸ್ಥಿತರಿದ್ದರು.
