ಹಾಸನ : ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ವಿಚಾರವಾಗಿ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡರ ಆಪ್ತ ಲಿಖಿತ್ ಹಾಗೂ ಚೇತನ್ ಇಬ್ಬರನ್ನು ಎಸ್.ಐ.ಟಿ. ತಂಡವು vಕೇಸು ಹಸ್ತಾಂತರ ಮಾಡಿಕೊಂಡು ಮ್ಮ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ರಾಜ್ಯವೇ ಬೆಚ್ಚಿ ಬೀಳಿಸೊ ಅಶ್ಲೀಲ ವೀಡಿಯೋಗಳ ವೈರಲ್ ಪ್ರಕರಣ ತನಿಖೆ ವೇಳೆ ಬೆನ್ನತ್ತಿ ಇಂಚಿಂಚು ಮಾಹಿತಿ ಜಾಲಾಡುತ್ತಿರೊ ಎಸ್.ಐ.ಟಿ. ತಂಡ. ಅಶ್ಲೀಲ ವೀಡಿಯೋ ವೈರಲ್ ಕೇಸ್ ಸಂಬಂಧ ಇಬ್ಬರನ್ನು ವಶಕ್ಕೆ ವಶಕ್ಕೆ ಪಡೆದು ವಿಚಾರಣೆ. ನಗರದ ಎನ್.ಆರ್. ವೃತ್ತದ ಬಳಿ ಇರುವ ನಗರ ಪೊಲೀಸ್ ಠಾಣೆಯಲ್ಲಿ ಬೀಡುಬಿಟ್ಟಿರೊ ಎಸ್.ಐ.ಟಿ. ಒಟ್ಟು ೨೦ಕ್ಕೂ ಹೆಚ್ಚು ಅಧಿಕಾರಿಗಳಿರುವ ತಂಡದಿಂದ ತನಿಖೆ. ಏಪ್ರಿಲ್ ೨೩ರ ರಂದು ಹಾಸನ ಸೈಬರ್ ಕ್ರೈಮ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್. ಪ್ರಕರಣ ಹಸ್ತಾಂತರ ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ.
ಅಶ್ಲೀಲ ವೀಡಿಯೋ ಹೊಂದಿದ್ದ ಪೆನ್ ಡ್ರೈವ್ ವೈರಲ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದಂತಾಗಿದೆ.
ಪೆನ್ ಡ್ರೈವ್ ವೈರಲ್ ವಿಚಾರದಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರದಾನ ಕಾರ್ಯದರ್ಶಿ ಪ್ರೀತಂಗೌಡ ಅತ್ಯಾಪ್ತ ಲಿಖಿತ್ ಗೌಡ ವಶಕ್ಕೆ. ನೆನ್ನೆ ಮದ್ಯರಾತ್ರಿಯೇ ಬಿಜೆಪಿಯ ಇಬ್ಬರು ಕಾರ್ಯಕರ್ತರ ವಶಕ್ಕೆ ಪಡೆಯೊ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ನಾಯಕರಿಗೆ ಚೆಕ್ ಮೇಟ್? ಪೆನ್ ಡ್ರೈವ್ ವೈರಲ್ ಸಂಬಂಧ ದಾಖಲಾಗಿರೊ ಕೇಸ್ ನಲ್ಲಿ ಹೆಸರೇ ಇಲ್ಲದ ಇಬ್ಭರನ್ನು ವಶಕ್ಕೆ ಪಡೆಯಲಾಗಿದೆ.
ಹಾಸನದ ನಗರ ಪೊಲೀಸ್ ಠಾಣೆ ಸಮಚ್ಚಯದಲ್ಲಿರೊ ಸೈಬರ್ ಕ್ರೈಂ ಠಾಣೆಯಲ್ಲಿ ಇಬ್ಬರ ವಿಚಾರಣೆ ನಡೆಸಲಾಯಿತು. ಆರೋಪಿಗಳನ್ನು ಸ್ಥಳ ಮಹಜರ್ ಗೆ ಕರೆದುಕೊಂಡು ಹೊರಟ ಎಸ್‌ಐಟಿ ಟೀಂ.ಆರೋಪಿ ಚೇತನ್ ಸ್ವಗ್ರಾಮವಾದ ತಾಲ್ಲೂಕು ನಿಟ್ಟೂರು ಹೋ. ಯಲಗುಂದಕ್ಕೆ ಕರೆದುಕೊಂಡು ಹೊರಟ ಪೊಲೀಸರು. ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ನಡೆಯುತ್ತಿರೊ ಮಹಜರ್. ಮತ್ತೊಂದೆಡೆ ಶ್ರವಣಬೆಳಗೊಳದಲ್ಲಿ ಲಿಖಿತ್ ಮಹಜರ್ ಚುರುಕುಗೊಂಡ ವೀಡಿಯೋ ವೈರಲ್ ಪ್ರಕರಣ ದ ತನಿಖೆ.
ಬಿಜೆಪಿ ಕೊರಳಿಗೂ ಸುತ್ತಿಕೊಂಡ ವೈರಲ್ ಪ್ರಕರಣ. ಪೆನ್‌ಡ್ರೈವ್ ಹಂಚಿಕೆ ಹಿಂದೆ ಪ್ರೀತಂ ಸಹಚರರ ಕೈವಾಡ.? ಇದಿಯಾ ಎಂಬುದನ್ನು ತಿಳಿಯಲು ಹಾಸನ ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ನಡೆಯುತ್ತಿರೋ ವಿಚಾರಣೆ. ವೈರಲ್‌ಗೆ ಸಂಬಂಧಿಸಿದಂತೆ ಸುಮೋಟೊ ದೂರಿನ ಅನ್ವಯ ವಿಚಾರಣೆ ಮಾಡಲಾಗುತ್ತಿದೆ.