
ಸಕಲೇಶಪುರ : ನಾಡ ಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಸಕಲೇಶ್ವರಸ್ವಾಮಿ ದೇವಸ್ಥಾನದ ಬಳಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಮೊದಲಿಗೆ ಗ್ರಾಮ ದೇವತೆ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ನಾಡ ಪ್ರಭು ಕೆಂಪೇಗೌಡರ ಪ್ರತಿಮೆಗೆ ಮಂಗಳಾರತಿ ಹಾಗೂ ಹೀಡುಗಾಯಿ ಹಾಕುವ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ಸಂಖ್ಯೆಯಲ್ಲಿ ಒಕ್ಕಲಿಗರ ಸಂಘದ ಪದಾಧಿಕಾರಿಗಳು ,ವೀರಶೈವ ಮುಖಂಡರು, ದಲಿತ ಮುಖಂಡರು, ಮುಸ್ಲಿಂ ಮುಖಂಡರು ಸೇರಿದಂತೆ ಇತರ ಎಲ್ಲಾ ವರ್ಗದ ಜನರು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಮೆರವಣಿಗೆಯಲ್ಲಿ ಸಾಗಿ ವಾದ್ಯಗೋಷ್ಟಿಗೆ ಹೆಜ್ಜೆ ಹಾಕುವ ಮೂಲಕ ಅಂಭೇಡ್ಕರ್ ಪ್ರತಿಮೆಗೆ ಹಾಗೂ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಪ್ರತಿಷ್ಠಾಪನೆ ಗೊಳ್ಳಲಿರುವ ಸ್ಥಳಕ್ಕೆ ಮೆರವಣಿಗೆಯಲ್ಲಿ ತರಲಾಯಿತು.
ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಅದ್ಯಕ್ಷರಾದ ಹೆಚ್.ಎಂ.ವಿಶ್ವನಾಥ್, ಮಲೆನಾಡು ವೀರಶೈವ ಸಮಾಜದ ಅದ್ಯಕ್ಷ ಧರ್ಮರಾಜ್, ಕಾರ್ಯದರ್ಶಿ ಯೆಡೆಹಳ್ಳಿ ಆರ್ ಮಂಜುನಾಥ್, ಪ್ರತಿಮೆ ದಾನಿಗಳು ಹಾಗೂ ಸಮಾಜ ಸೇವಕರಾದ ಪ್ರತಾಪ್‌ಗೌಡ ಬಾಚಹಳ್ಳಿ,ಕಾಂಗ್ರೆಸ್ ಅದ್ಯಕ್ಷ ಬೈರಮುಡಿ ರಾಮಚಂದ್ರು, ಸುಪ್ರದೀಪ್ ಯಜಮಾನ್, ಸಚಿನ್ ಪ್ರಸಾದ್, ಡಿಸಿ ಸಣ್ಣಸ್ವಾಮಿ, ನಂದಿಕೃಪ ದೇವರಾಜು ಜೈಮಾರುತಿ ದೇವರಾಜು, ಸಬ ಭಾಸ್ಕರ್, ಮುಸ್ಲಿಂ ಮುಖಂಡರಾದ ಇಬ್ರಾಹಿಂ ಯಾದ್ಗಾರ್, ಕೊಲ್ಲಹಳ್ಳಿ ಸಲೀಂ, ಹಿಂದೂ ಮುಖಂಡ ರಘು , ಇತರರು ಇದ್ದರು.



