ಆಲೂರು : ನೆನ್ನೆ ತಾಲ್ಲೂಕಿನ ಮುತ್ತಿಗೆ ಗ್ರಾಮದ ನಾಲ್ವರು ಮಕ್ಕಳು ಕೆರೆಯಲ್ಲಿ ಈಜಲು ಹೋಗಿ ಸಾವನಪ್ಪಿರುವ ಮೃತ ಮಕ್ಕಳ ಮನೆಗೆ ಇಂದು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ತಿಳಿಸಿ ಮಾಧ್ಯಮದವರೊಂದಿಗೆ ಮಾತಾನಾಡಿದವರು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ಈ ತರಹದ ಮನಕಲಕುವ ಘಟನೆ ಮಾದಲ ಬಾರಿಗೆ ಸಂಭವಿಸಿದೆ
ಒಂದೇ ಗ್ರಾಮದ ನಾಲ್ವರು ಮಕ್ಕಳು ಸಾವನಪ್ಪಿರುವುದು ದೃರ್ದೈವದ ಸಂಗತಿ ಪೋಷಕರು ಬೇಸಿಗೆಯಲ್ಲಿ ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಬೇಕು ಏಕೆಂದರೆ ಎಲ್ಲಾ ಹತ್ತು -ಹನ್ನೆರಡು ವಯಸ್ಸಿನ ಮಕ್ಕಳೇ ಆ ಮಕ್ಕಳ ಪೋಷಕರಿಗೆ ಧೈರ್ಯ ಹೇಳುವ ಶಕ್ತಿ ನಮಗಿಲ್ಲ ಈ ತರಹದ ಘಟನೆ ಮತ್ತೆ ಯಾವ ಹಳ್ಳಿಗಳಲ್ಲೂ ಮತ್ತೆ ಮರುಕಳಿಸಬಾರದು
ಆ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ, ಬದುಕಿ ಬಾಳ ಬೇಕಾದ ಮಕ್ಕಳು ಈ ರೀತಿ ಮಾಡಿಕೊಂಡರೆ ಆ ತಂದೆ -ತಾಯಿಯರ ನೋವು ಹೇಗಿರುತ್ತದೆ ಅದನ್ನು ಊಹಿಸಲು ಸಾಧ್ಯವಿಲ್ಲ,ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳ ಜೋತೆ ಮಾತಾನಾಡಿ ಕೊಡಲೇ ಪರಿಹಾರದೊರಕಿಸಿಕೊಡದಾಗಿ ತಿಳಿಸುತ್ತೇನೆ ಎಂದರು,
ಹಾಗೂ ಪರಿಹಾರವೇ ಶಾಶ್ವತವಲ್ಲ ಆದರೂ ಕೂಡ ಮನೆಯ ಪರಿಸ್ಥಿತಿ ತುಂಬಾ ಕಷ್ಟವಾಗಿದೆ ಈ ಕುಟುಂಬದವರಿಗೆ ಮನೆಕಟ್ಟಲು ಜಾಗವಿಲ್ಲ ಕಟ್ಟಿದ ಮನೆಯು ಕೂಡ ಅವರ ಹೆಸರಿನಲ್ಲಿಲ್ಲ ಮಕ್ಕಳನ್ನು ಮತ್ತೆ ಒದಗಿಸಿಕೊಡಲು ಸಾಧ್ಯವಿಲ್ಲ ಈಗಿರುವ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕದರು ಪರಿಹಾರ ಸಹಾಯವಾಗುತ್ತದೆ.
ಬೇಸಿಗೆ ರಜೆಯಲ್ಲಿ ತಂದೆ -ತಾಯಂದಿರು ಮಕ್ಕಳ ಬಗ್ಗೆ ಜವಾಬ್ದಾರಿವಹಿಸಬೇಕು ಶಾಲೆಗೆ ಈಗ ರಜೆ ಇರುವ ಕಾರಣ ಹೆತ್ತವರು ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಬೇಕು,ಚಿಕ್ಕ ಮಕ್ಕಳು ಆಟ ಆಡುವ ವಯಸ್ಸು ಅವರನ್ನು ತಡೆಯಲು ಸಾಧ್ಯವಿಲ್ಲ ಆದರೂ ಕೂಡ ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಬೇಕು, ಮುಂದೆ ಕಷ್ಟ ಅನುಭವಿಸುದಕ್ಕಿಂತ ನಾವೇ ಮೊದಲೇ ಜವಾಬ್ದಾರಿ ತೆಗೆದುಕೊಂಡರೆ ಈ ತರಹದ ಘಟನೆಗಳು ಸಂಭವಿಸುವುದಿಲ್ಲ
ದೇವರು ಆ ನೋವನ್ನು ಮರೆಸುವ ಶಕ್ತಿ ಭಗವಂತ ನೀಡಲಿ ಎಂದರು,,,ಕಾಂಗ್ರೆಸ್ ಮುಖಂಡ ಮುರುಳಿಮೋಹನ್ ಮಾತಾನಾಡಿ ಮಕ್ಕಳು ಸಾವನಾಪ್ಪಿರುವುದು ನೋವಿನ ಸಂಗತಿ
ತಂದೆ – ತಾಯಿಯರ ಗೋಳಟವನ್ನು ಕಣ್ಣಲ್ಲಿ ನೋಡಲು ಅಸಾಧ್ಯ ಮನೆಯಲ್ಲಿ ಆಟವಾಡಿಕೊಂಡು ಬೆಳೆದ ಮಕ್ಕಳು ಕಣ್ಮರೆಯಾದರೆ ಆ ನೋವನ್ನು ಯಾರು ಸಹಿಸಲು ಸಾಧ್ಯವಿಲ್ಲ ದೇವರು ಆ ಕುಟುಂಬಕ್ಕೆ ನೋವನ್ನು ಮರೆಸುವ ಶಕ್ತಿ ನೀಡಲಿ ನಮ್ಮ ಸರ್ಕಾರದ ವತಿಯಿಂದ ಮೃತ ಕುಟುಂಬಸ್ಥರಿಗೆ ಪರಿಹಾರ ದೊರಕಿಸಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರಿದ್ದರು.