ಹಾಸನ : ಅತ್ಯಾಚಾರ ಪ್ರಕರಣ ವಿಚಾರವಾಗಿ ಆರೋಪ ಎದುರಿಸುತ್ತಿರುವ ವಕೀಲ ದೇವರಾಜೇಗೌಡರಿಂದ ಪೊಲೀಸ್ ಅಧಿಕಾರಿಗಳು ಮಹತ್ವದ ಮಾಹಿತಿ ಪಡೆದ ಬಳಿಕ ಪೊಲೀಸ್ ಕಸ್ಟಡಿ ಅಂತ್ಯಗೊಂಡು ಮತ್ತೆ ಹಾಸನ ಜಿಲ್ಲಾ ಬಂದಿಖಾನೆಗೆ ತಂದು ಬಿಡಲಾಯಿತು.
ವಿಚಾರಣೆಗೆಂದು ಜಿ. ದೇವರಾಜೇಗೌಡರನ್ನು ಜೈಲಿನಿಂದ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಕರೆದೊಯ್ದಿದ್ದರು.
ಒಂದೆರಡು ದಿನದ ನಂತರ ಮತ್ತೆ ವಾಪಸ್ ಹಾಸನ ಜಿಲ್ಲಾ ಕಾರಗೃಹಕ್ಕೆ ಪೊಲೀಸ್ ವಾಹನದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋದರು.
ಪೊಲೀಸ್ ಜೀಪ್ ನಿಂದ ಇಳಿದು ಜೈಲಿನ ಒಳಗೆ ಹೋಗಬೇಕಾದರೆ ವಕೀಲ ದೇವರಾಜೇಗೌಡ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ, ತನಿಖೆ ಪೂರ್ಣಗೊಂಡರೇ ಸತ್ಯತೆಗಳು ಹೊರಬರಲಿದೆ.
ಈಗತಾನೆ ಪೊಲೀಸ್ ಕಸ್ಟಡಿ ಮುಗಿದಿದೆ. ಜಾಮೀನಿಗೆ ಈಗ ಅರ್ಜಿ ಹಾಕುತ್ತಿದ್ದೇವೆ. ಮುಂದೆ ಎಲ್ಲಾ ಸತ್ಯ ಹೊರಗೆ ಬರುತ್ತದೆ. ಸತ್ಯ, ಧರ್ಮದ ಪರ ಹೋರಾಟ ಮಾಡುವ ನಾಯಕ ನಾನು. ತಲೆಕೆಡಿಸಿಕೊಳ್ಳುವುದಿಲ್ಲ. ಧೈರ್ಯವಾಗಿ, ಆರಾಮಗಿ ಇರಿ. ಯಾವ ಷಡ್ಯಂತ್ರ ಇದೆ ಅದರಿಂದ ಯಾರು ಏನು ಮಾಡಲು ಆಗಲ್ಲ. ಕಾನೂನಿಗೆ ತಲೆ ಬಾಗಲೇಬೇಕು, ಸತ್ಯಕ್ಕೆ ಜಯವಿದೆ.
ಸತ್ಯ ಮುಂದೆ ಹೊರ ಬರುತ್ತದೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಮಾತನಾಡಲು ಅವಕಾಶ ಕೊಡದೇ ಬಂದಿಖಾನೆ ಒಳಗೆ ಪೊಲೀಸರು ಕರೆದುಕೊಂಡು ಹೋದರು.