ಸಕಲೇಶಪುರ : ವಕ್ಫ್ ಬೋರ್ಡ್ ಹಿಂದೂಗಳ ಬದುಕಿನ ಜೊತೆ ಚೆಲ್ಲಾಟವಾಡಲು ಕಾಂಗ್ರೆಸ್ ಬಳುಸುತ್ತಿರುವ ಅಸ್ತ್ರವಾಗಿದ್ದು, ಮೊಘಲರು ಈ ದೇಶ ಲೂಟಿ ಮಾಡಿದ ಹಾಗೇ ವಕ್ಫ್ ಬೋರ್ಡ್ ಇಂದು ಇಡಿ ಭಾರತವನ್ನು ನುಂಗಲು ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದು, ಸರ್ಕಾರಿ ಜಾಗ, ಸರ್ಕಾರಿ ಸ್ಮಶಾನ, ದೇವಸ್ಥಾನ, ಮಠ ಮಂದಿರಗಳು ವಕ್ಫ್ ಅಸ್ಥಿಯಲ್ಲಿ ಇದೆ ಎಂದು ನೋಟೀಸ್ ನೀಡಿ ವಕ್ಫ್ ಟ್ರಿಬ್ಯೂನಲ್ ಕೋರ್ಟ್ ನಡೆಸುತ್ತಿರೋದು ಆತಂಕಕಾರಿ ಬೆಳವಣಿಗೆ ಆಗಿದ್ದು, ಇದರ ವಿರುದ್ಧ ದೊಡ್ಡ ಮಟ್ಟದ ಜನಜಾಗೃತಿ ಆಗಬೇಕಿದೆ.

ಗುಜರಾತ್’ನ ಕೋರ್ಟ್ ಜಾಗ ವಕ್ಫ್ ಗೆ ಸೇರಿದ್ದು, ಎಂದು ವಾದ ಮಾಡಿ ಗೊಂದಲ ಮೂಡಿಸಿ ಮಾಸುವ ಮುನ್ನವೇ ವಿಜಾಪುರದ 10 ಸಾವಿರ ಎಕ್ಕರೆ ಜಮೀನು ವಕ್ಫ್ ಗೆ ಸೇರಿದ್ದು ಎಂದು ಬಡ ರೈತರಿಗೆ ನೋಟೀಸ್ ನೀಡಿದ್ದು ರೈತರ ಪಹಣಿ ಕಾಲಂನಲ್ಲಿ ವಕ್ಫ್ ಅಸ್ಥಿ ಎಂದು ನಮೂದಾಗಿರೋದು ಬಡ ಹಿಂದೂ ರೈತರ ಜೀವನಕ್ಕೆ ಬೆಂಕಿ ಇಟ್ಟಿತ್ತು ವಕ್ಫ್.

ಜಮೀರ್ ಅಹ್ಮದ್ ಕರ್ನಾಟಕ ರಾಜ್ಯದ ವಕ್ಫ್ ಮಂತ್ರಿ ಆಗಿರೋದು ನಮ್ಮೆಲ್ಲರ ದುರಂತವಾಗಿದ್ದು ,ವಕ್ಫ್ ಹೆಸರಿನಲ್ಲಿ ಬಡ ರೈತರ ಮೇಲೆ ದೌರ್ಜನ್ಯ ಮಾಡಿ ನೂರಾರು ವರ್ಷದಿಂದ ಒಕ್ಕಲತನ ಮಾಡುತಿದ್ದ ರೈತರ ಜಮೀನು ವಕ್ಫ್ ಗೆ ಸೇರಿದ್ದು ಎಂದು ನೋಟೀಸ್ ನೀಡಿ ಹೋರಾಟದ ಹಾದಿ ಹಿಡಿಯುವ ಹಾಗೆ ಮಾಡಿದ್ದೂ ಜಮೀರ್ ಅಹ್ಮದ್. ಜಮೀರ್ ಅಹ್ಮದ್ ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಮಯದಲ್ಲಿ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ದ್ವೇಷ ಭಾವನೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಪ್ರಮಾಣ ಮಾಡಿ ಇಂದು ವಕ್ಫ್ ಜಮೀನಿಗೆ ಹಸಿರು ಬಣ್ಣ ಹಚ್ಚಿ ಅಲ್ಲಾಹನಿಗೆ ಲೆಕ್ಕ ಕೊಡಬೇಕು ಎಂದು ಹಿಂದೂ ದ್ವೇಷಿ ಭಾಷಣ ಮಾಡಿರೋದು ಸಂವಿಂಧಾನಾ ವಿರೋಧಿಯಾಗಿದೆ.

ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಲ್ಲಿ ಈ ಮೂಲಕ ಮನವಿ ಮಾಡುವುದೆಂದರೆ ತಕ್ಷಣ ಜಮೀರ್ ಅಹ್ಮದ್ ನನ್ನನ್ನ ಸಂಪುಟದಿಂದ ಕೈ ಬಿಟ್ಟು ಕರ್ನಾಟಕದ ರೈತರು ಶಾಂತಿಯಿಂದ ಬದುಕಲು ಬಿಡಬೇಕು ಇಲ್ಲವಾದಲ್ಲಿ ಇದರ ವಿರುದ್ಧ ದೊಡ್ಡ ಮಟ್ಟದ ಜನಜಾಗೃತಿ ಮಾಡಿ ಪ್ರತಿ ಹಳ್ಳಿಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡುತ್ತೇವೆ ಎಂದು ಹಿಂದೂ ಮುಖಂಡ ರಘು ಸಕಲೇಶಪುರ ಪ್ರತಿಕ್ರಿಯಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *