ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಮೊಗನಹಳ್ಳಿ,ಹಿರದನಹಳ್ಳಿ ಗ್ರಾಮಸ್ಥರಿಂದ ಮೂಲಭೂತ ಸೌಕರ್ಯ ಕಲ್ಪಿಸದ ಎತ್ತಿನಹೊಳೆ ಯೋಜನೆ ವಿರುದ್ಧ ಇಂದು ಮೊಗನಹಳ್ಳಿ ಡ್ಯಾಮ್ ಗೆ ಬೀಗ ಹಾಕಿ ಪ್ರತಿಭಟನೆ ನೆಡೆಸಿದರು.
ಈ ಎರಡು ಗ್ರಾಮಗಳ ಎರಡು ಕಿಲೋಮೀಟರ್ ಅಂತರದಲ್ಲಿ ಡ್ಯಾಮ್ ಕಟ್ಟಲಾಗುತ್ತಿದ್ದು, ಪ್ರಾರಂಭದಲ್ಲಿ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಾದ ಮೊಬೈಲ್ ನೆಟ್ವರ್ಕ್ ಟವರ್ , ಕುಡಿಯುವ ನೀರಿನ ವ್ಯವಸ್ಥೆ,ಗ್ರಾಮಕ್ಕೆ ರಸ್ತೆ, ದೇವಸ್ಥಾನದ ಅಭಿವೃದ್ಧಿ,ಸ್ಥಳೀಯರಿಗೆ ಉದ್ಯೋಗವಕಾಶ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುತ್ತೇವೆ ಎಂದು ಈ ಹಿಂದಿನ ಜನಪ್ರತಿನಿಧಿಗಳು ಹಾಗೂ ಎತ್ತಿನಹೊಳೆ ಅಭಿರುದ್ದಿ ಅಧಿಕಾರಿಗಳು ಹೇಳಿದ್ದರು.
ಈಗಾಗಲೇ 90 ಪರ್ಸೆಂಟ್ ಡ್ಯಾಮ್ ಕೆಲಸ ಮುಗಿದಿದ್ದು , ಕೋಲಾರ ಹಾಗೂ ದೊಡ್ಡಬಳ್ಳಾಪುರ ಜಿಲ್ಲೆಗಳಿಗೆ ನೀರು ಕೊಡುವ ಕೆಲಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವರಾದ ಡಿ.ಕೆ ಶಿವಕುಮಾರ್ ಅವರಿಂದ ಉದ್ಘಾಟನೆಗೊಂಡಿದೆಯಾದರು ಇದುವರೆಗು ಯಾವುದೇ ಮೂಲಭೂತ ಸೌಕರ್ಯಗಳನ್ನು ಹೇಳಿದಂತೆ ಗ್ರಾಮಸ್ಥರಿಗೆ ಮಾಡಿಲ್ಲ.ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಇಂದು ಬೆಳಿಗ್ಗೆ 9:00ಗೆ ಮೊಗನಹಳ್ಳಿ ಡ್ಯಾಮ್ ಗೆ ಬೀಗ ಹಾಕಿ ಪ್ರತಿಭಟನೆ ಬ್ಯಾನರ್ ಹಿಡಿದು ಎತ್ತಿನಹೊಳೆ ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆ ಹಮ್ಮಿಕೊಂಡರು .
ಸ್ಥಳಕ್ಕೆ ಬಂದ ಎತ್ತಿನಹೊಳೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇಕ್ಬಾಲ್ ಅವರು ಗ್ರಾಮಸ್ಥರ ಅವಹಲುಗಳನ್ನು ಕೇಳಿ ಕೂಡಲೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ ಸರ್ಕಾರದಿಂದ ಅನುಮೋದನೆಗೆ ಪಡೆದುಕೊಂಡು ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡುತ್ತೇವೆ . ಎಂದು ಭರವಸೆ ನೀಡಿದರು. ಹಾಗೂ ಮೊಬೈಲ್ ನೆಟ್ವರ್ಕ್ ಟವರ್ ಬಗ್ಗೆ ಕೂಡಲೇ ನಮ್ಮ ಕಡೆಯಿಂದ ಒಂದು ಮನವಿಯನ್ನು ಬಿ ಎಸ್. ಏನ್. ಎಲ್ ಮೇಲಧಿಕಾರಿಗಳಿಗೆ ಕೊಡುತ್ತೇವೆ ಎಂದು ಹೇಳಿ ಗ್ರಾಮಸ್ಥರನ್ನು ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು.
ಗ್ರಾಮಸ್ಥರೆಲ್ಲ ಸೇರಿ ತಮ್ಮ ಮೂಲಭೂತ ಸೌಕರ್ಯಗಳ ಬಗ್ಗೆ ಮನವಿ ಪತ್ರವನ್ನು ಎತ್ತಿನಹೊಳೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇಕ್ಬಾಲ್ ಅವರಿಗೆ ಸಲ್ಲಿಸಿ ಹತ್ತು ದಿನಗಳ ಒಳಗೆ ತಮ್ಮ ಬೇಡಿಕೆಗಳನ್ನು ಇಡೆರಿಸುವಂತೆ ಒತ್ತಾಯಿಸಿದರು. ಇಲ್ಲವಾದರೆ ಡ್ಯಾಮಿಗೆ ಬೀಗ ಹಾಕಿ ಉಪವಾಸ ಸತ್ಯಾಗ್ರಹವನ್ನು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಿರದನಹಳ್ಳಿ ಹೆಚ್.ಬಿ ಹೂವಣ್ಣ ಗೌಡ, ಮೊಗನಹಳ್ಳಿ ರಾಜೇಗೌಡ, ಹಿರದನಹಳ್ಳಿ ಪ್ರಕಾಶ್,ಹೆಚ್.ಪಿ ಮೋಹನ್ ಕುಮಾರ್,ಕುಮಾರ್ ಸ್ವಾಮಿ,ಚಂದ್ರಶೇಖರ್,ಹೆಚ್.ಬಿ ರಾಮು,ಪ್ರಸನ್ನ,ಲಕ್ಕಿ,ಮೊಗಣ್ಣ ಗೌಡ, ವೆಂಕಟೇಶ್ ಮೊಗನಹಳ್ಳಿ,ಹೆಚ್.ಬಿ ರಾಜು,ಹೆಚ್. ಹೆಚ್ ಮದನ್, ಹೆಚ್. ಜಿ ಲೋಕೇಶ್,ಗೋವಿಂದೇಗೌಡ,ಹೆಚ್.ಪಿ ಮಹೇಶ್,ಅಪ್ಪಣ್ಣ,ಎಂ.ಎಂ ವಿಶ್ವನಾಥ್,ಸಚಿನ್,ಪುಟ್ಟಗೌರ,ಸಹಾಯಕ ಇಂಜಿನಿಯರ್ ಗಳಾದ ಬಾಲಕೃಷ್ಣ, ಉಮರ್ ಪರುಕ್,ಗೀತಾ, ನಳಿನಾಕ್ಷಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ನೆರದಿದ್ದರು.