
ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ 75 ಸಕಲೇಶಪುರ ತಾಲ್ಲೂಕಿನ ಸಕಲೇಶಪುರ ಪಟ್ಟಣ ಹಾಗೂ ಬಾಳ್ಳುಪೇಟೆ ಗ್ರಾಮದೊಳಗೆ ಕೈಗೊಳ್ಳಲಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಭೂಮಿ ಪೂಜೆ ಕಾರ್ಯಕ್ರಮಕ್ಕೆ ನಮ್ಮ ಹಾಸನ ಜಿಲ್ಲೆಯ ಸಂಸದರು ಆದಂತಹ ಸನ್ಮಾನ್ಯ ಶ್ರೇಯಸ್ ಎಂ ಪಟೇಲ್ ರವರು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರ (ಆಲೂರು ಕಟ್ಟಾಯ ಸಕಲೇಶಪುರ)ದ ಕಾಂಗ್ರೆಸ್ ಮುಖಂಡರು ಮತ್ತು ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷರು ಆದಂತಹ ಸನ್ಮಾನ್ಯ ಮುರಳಿ ಮೋಹನ್ ರವರು ಹಾಗೂ ಸಕಲೇಶಪುರ ತಾಲ್ಲೂಕಿನ ಸಕಲೇಶಪುರ ಪಟ್ಟಣದ ಹಾಗೂ ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಪ್ರಮುಖರು ಹಾಗೂ ಸಾರ್ವಜನಿಕರೊಂದಿಗೆ ಭೂಮಿಯನ್ನು ನೆರವೇರಿಸಲಾಯಿತು
ಬೆಂಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು ಶೀಘ್ರದಲ್ಲೇ ಕೆಲಸ ಮುಗಿಸುವಂತೆ ಹೆದ್ದಾರಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
ಪಟ್ಟಣದಲ್ಲಿ ಕೈಗೊಂಡಿರುವ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲಾಯಿತು.
ಸಕಲೇಶಪುರ ಹಾಗೂ ಬಾಳ್ಳುಪೇಟೆ ರಸ್ತೆಯನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಯಿತು




