
ಸಕಲೇಶಪುರ : ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಏಪ್ರಿಲ್ 28ರಂದು ಚುಟುಕು ಕವಿ ಕಾವ್ಯ ಕಾಜಾಣ ಮತ್ತು ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಬಸವಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಸಕಲೇಶಪುರ ಪಟ್ಟಣದ ಲಯನ್ಸ್ ಸಭಾಂಗಣದ ಜಾನಪದ ಜಂಗಮ ಎಸ್ ಕೆ ಕರೀಂ ಖಾನ್ ವೇದಿಕೆಯಲ್ಲಿ ಏರ್ಪಡಿಸಲಾಗಿದೆ ಎಂದು ಸಕಲೇಶಪುರ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶ್ ಜಿ ತಿಳಿಸಿದ್ದಾರೆ.
ಇತ್ತೀಚಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದ 982ನೇ ರ‌್ಯಾಂಕ್ ಗಳಿಸಿ ಸಕಲೇಶಪುರ ತಾಲೂಕಿಗೆ ಕೀರ್ತಿ ತಂದಿರುವ ಸಕಲೇಶಪುರ ಪಟ್ಟಣದ ಮಲ್ಲಿಕಾರ್ಜುನ ನಗರ ನಿವಾಸಿ ಟಿ ಸುಬ್ರಹ್ಮಣ್ಯ ನಿವೃತ್ತ ಸಹಾಯಕ ನಿರ್ದೇಶಕರು ಮತ್ತು ವಿಜಯಕುಮಾರಿ ಹಿರಿಯ ಶಿರಸ್ತೇದಾರ್ ಸಿವಿಲ್ ನ್ಯಾಯಾಲಯ ಸಕಲೇಶಪುರ ಇವರ ಪುತ್ರಿ ಕೆ.ಎಸ್.ಧನ್ಯ ಇವರನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಮಾಡಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ವೇದಿಕೆಯಲ್ಲಿರುವ ಗಣ್ಯರಿಂದ ಸನ್ಮಾನಿಸಲಾಗುವುದು.
ಇದೇ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಪ್ರಬಂಧ ರಚನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜಯಶಾಲಿಗಳಾಗಿರುವ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು.ತಾಲ್ಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರ
ಪ್ರಥಮ:1.ತೇಜನ್ ಸಹಿಪ್ರಾಶಾಲೆ ಯಡೇಹಳ್ಳಿ
2.ಕು.ಕಾವ್ಯ ವೈ ಎಸ್ ಕೆಪಿಎಸ್ ಹೆತ್ತೂರು ದ್ವಿತೀಯ:
1.ಪೂರ್ಣಿಮಾ ಸಹಿಪ್ರಾಶಾಲೆ ಬೆಳಗೋಡು
2.ನವ್ಯ ಜಿ ಕೆ ಸಹಿಪ್ರಾಶಾಲೆ ಹಾಡ್ಲಹಳ್ಳಿ
ತೃತೀಯ: 1.ಗಾನವಿ ಸಪ್ರೌಶಾಲೆ ಬೆಳಗೋಡು
2.ಕಿರಣ್ ಕೆ ಕೆ ಸಹಿಪ್ರಾಶಾಲೆ ಹೆಚ್ ವಿ ಹಳ್ಳಿ
ಪ್ರಬಂಧ ಸ್ಪರ್ಧೆಯನ್ನು ವ್ಯವಸ್ಥಿತವಾಗಿ ನಡೆಸಿಕೊಟ್ಟ ತೀರ್ಪು ಮಂಡಳಿಯ ಇಂದಿರಾ ಲೋಕೇಶ್ ಬೆಳಗೋಡು, ಅರುಣ್ ಕರಡಿಗಾಲ, ಕೀರ್ತಿ ಕಿರಣ್, ಶೋಭಾ ಸತೀಶ್ ಹೆತ್ತೂರು ಪುಷ್ಪ ರೋಟರಿ ಇವರಿಗೆ ಗೌರವಿಸಲಾಗುವುದು.
ಇದೇ ಸಂದರ್ಭದಲ್ಲಿ ಸಾಹಿತಿ ವಿಶ್ವಾಸ್ ಡಿಗೌಡ ಇವರ ಚೈತ್ರದ ಚೈತನ್ಯ ಪುಸ್ತಕವನ್ನು ಮೈಸೂರು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ರತ್ನ ಹಾಲಪ್ಪಗೌಡರು ಲೋಕಾರ್ಪಣೆಗೊಳಿಸಲಿದ್ದಾರೆ.
ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು ಎಂಬತ್ತಕ್ಕೂ ಹೆಚ್ಚು ಕವಿಗಳು ಭಾಗವಹಿಸಲಿದ್ದಾರೆ.