
ಕಾಡಾನೆ ದಾಳಿ ವ್ಯಕ್ತಿ ಬಲಿ
ಸಕಲೇಶಪುರ:ಏ, 25: ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕನೊಬ್ಬ ಬಲಿಯಾಗಿರುವ ಘಟನೆ ತಾಲೂಕಿನ ಬೈಕೆರೆ ಗ್ರಾಮದಲ್ಲಿ ನಡೆದಿದೆ.ಷಣ್ಮುಖ(45) ಅಮೃತೇಶ್ವರ ಕಾಫಿ ತೋಟದ ಮಾಲಿಕ ಮೃತಪಟ್ಟಿರುವ ವ್ಯಕ್ತಿಯಾಗಿದ್ದರೆ.
ತೋಟದಲ್ಲಿ ಕೆಲಸ ಮಾಡಿಸಲು ತೆರಳಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಮೃತ ಷಣ್ಮುಖ ಗೆ 15 ಎಕರೆ ಕಾಫಿ ಕಾಫಿ ತೋಟವಿದೆ. ರಾತ್ರಿಯಿಂದಲೇ ಆನೆಗಳ ಹಿಂಡು ತೋಟದಲ್ಲಿ ಬೀಡು ಬಿಟ್ಟಿತ್ತು ಈ ಮಾಹಿತಿ ಷಣ್ಮುಖ ರವರಿಗೂ ತಿಳಿದಿತ್ತು ಹೀಗಿದ್ದರೂ ಸಹ ಇವರು ಏಕೆ ತೋಟಕ್ಕೆ ಹೋದರು ಎಂಬುದು ತಿಳಿದು ಬಂದಿಲ್ಲ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರು ಭೇಟಿ ನೀಡಿದ್ದಾರೆ.
