
ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ಶ್ರೀ ಮಲ್ಲೇಶ್ವರ ಪ್ರೌಢ ಶಾಲೆ ಹೆಚ್. ವಿ ಹಳ್ಳಿ ಶಾಲೆಯ ಮಕ್ಕಳ ಸಾಧನೆ.
ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಹೋಬಳಿಯ ಹೆಚ್. ವಿ ಹಳ್ಳಿಯ ಶ್ರೀ ಮಲ್ಲೇಶ್ವರ ಪ್ರೌಢ ಶಾಲೆಯ ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 93 ಫಲಿತಾಂಶವನ್ನು ತಂದು ತಾಲ್ಲೂಕಿಗೆ ಮಾದರಿ ಶಾಲೆಯಾಗಿ ಹೊರಹೊಮ್ಮಿದ್ದೆ.
ಈ ಶಾಲೆಯಲ್ಲಿ ಎಸ್.ಎಸ್.ಎಲ್. ಸಿ ಯಲ್ಲಿ 27 ವಿದ್ಯಾರ್ಥಿಗಳು ಕಲಿಯುತ್ತಿದ್ದು ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಹಳ್ಳಿಗಾಡಿನಿಂದ ಬಂದಿದ್ದರು. ರೈತಪಿ ಕುಟುಂಬಕ್ಕೆ ಸೇರಿದ ಈ ವಿದ್ಯಾರ್ಥಿಗಳು ಪ್ರತಿನಿತ್ಯ ನಾಲ್ಕೈದು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಶಾಲೆಗೆ ಬಂದು ವಿದ್ಯಾಭ್ಯಾಸ ಮಾಡಿದ ಈ ವಿದ್ಯಾರ್ಥಿಗಳು ಇಂದು ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ನಿತೇಶ್ 536, ಸಾನಿಕ 535,ಲತೀಕ್ 534 ಅಂಕಗಳು ಪಡೆದು ಜಿಲ್ಲಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಉಳಿದ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಉತ್ತೀರಣರಾಗಿರುವುದು ಈ ಹಳ್ಳಿಗಾಡಿನ ಪ್ರೌಢ ಶಾಲೆಗೆ ಮತ್ತೊಂದು ಗರಿ ಬಂದಂತಾಗಿದೆ .
ಈ ವಿದ್ಯಾರ್ಥಿಗಳ ಸಾಧನೆಗೆ ವ್ಯಾಪಾಕ ಪ್ರಸಂಸೆ ವ್ಯಕ್ತವಾಗಿದೆ.



