ಸಕಲೇಶಪುರ : ನಗರ ಠಾಣಾ ವ್ಯಾಪ್ತಿಯ ಮಠಸಾಗರ ಗ್ರಾಮದಲ್ಲಿ 25/03/25 ರಂದು ಒಂದು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯ 25 ಗ್ರಾಂ ಚಿನ್ನದ ತಾಳಿ ಸರವನ್ನು ಕಿತ್ತುಕೊಂಡು ಹೋಗಿದ್ದು ಈ ಕೃತ್ಯದ ಬಗ್ಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಕಲೇಶಪುರ ನಗರ ಪೊಲೀಸ್ ಠಾಣೆಯ ಕ್ರೈಮ್ ತಂಡ ವಿವಿಧ ತಂತ್ರಜ್ಞಾನ ಹಾಗೂ ಸಿಸಿ ಕ್ಯಾಮರಾಗಳ ಸಹಾಯದಿಂದ ಆರೋಪಿಯನ್ನು ಪತ್ತೆಹಚ್ಚಿದ್ದು ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದ ವ್ಯಕ್ತಿಯ ಹೆಸರು ಸೈಯದ್ ಅಲಿ ನಡಾಫ್ ಬಿನ್ ಬಾಳಾಸಾಬ್, 27 ವರ್ಷ, ಮುಸ್ಲಿಂ ಜನಾಂಗ, ಹುಲ್ಲೂರು ಗ್ರಾಮ ಲಕ್ಷ್ಮೇಶ್ವರ ತಾಲ್ಲೂಕು ಗದಗ ಜಿಲ್ಲೆ.

ಈತನನ್ನು ಗದಗ ನಗರದ ಬಸ್ ನಿಲ್ದಾಣದಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಾನು ಮಾಡಿರುವ ಕೃತ್ಯವನ್ನು ಒಪ್ಪಿಕೊಂಡಿರುತ್ತಾನೆ.

ವಿಶೇಷವೇನೆಂದರೆ ಈ ಆರೋಪಿಯು 2016 ನೇ ವರ್ಷದ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ 2 ನೇ ಟಾಪರ್ ಆಗಿದ್ದು ಶೋಕಿಜೀವನ ಹಾಗೂ ಐಪಿಎಲ್ ಬೆಟ್ಟಿಂಗ್ ಚಾಳಿಗೆ ಬಿದ್ದು ಕಳ್ಳತನಕ್ಕೆ ಇಳಿದಿರುತ್ತಾನೆ.

ಈ ಪ್ರಕರಣವನ್ನು ಭೇದಿಸುವಲ್ಲಿ ಹಾಸನ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕು.ಮೊಹಮ್ಮದ್ ಸುಜೀತಾ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ವೆಂಕಟೇಶ್ ನಾಯ್ಡು ಮತ್ತು ತಮ್ಮಯ್ಯ ರವರುಗಳ ಮಾರ್ಗದರ್ಶನದಲ್ಲಿ ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ರವರುಗಳ ಸಾರಥ್ಯದಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣೆಯ PSI ಗಳಾದ ಮಹೇಶ್ ಹಾಗೂ ಕೃಷ್ಣಪ್ಪ ಇವರುಗಳ ನೇತೃತ್ವದಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣೆಯ ಕ್ರೈಮ್ ತಂಡದ ಸಿಬ್ಬಂದಿಗಳಾದ ಹೆಡ್ ಕಾನ್ಸ್‌ಟೇಬಲ್ ಪೃಥ್ವಿ,ಪಿಸಿ ಗಳಾದ ಚಂದ್ರಕಾಂತ್,ರೇವಣ್ಣ,ಅಶೋಕ,ಶಾಂತರಾಜು ಮತ್ತು ಹಾಸನ ಜಿಲ್ಲಾ ಪೊಲೀಸ್ ಕಛೇರಿಯ ತಂತ್ರಜ್ಞಾನ ವಿಭಾಗದ ಸಿಬ್ಬಂದಿಗಳಾದ ಪೀರ್ ಖಾನ್,ಲೋಕೇಶ್, ಆತ್ಮಾನಂದ ಮುಂತಾದವರುಗಳು ಶ್ರಮಿಸಿರುತ್ತಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *