
ಸಕಲೇಶಪುರ.: ತಾಲೂಕಿನ ಯಸಳೂರು ಹೋಬಳಿ ವಣಗೂರು ಪಂಚಾಯತಿ ತಂಬಲಗೇರಿ ಮತ್ತು ಕಲ್ಲಹಳ್ಳಿ ಗ್ರಾಮದಲ್ಲಿ ಕಾಡುಕೋಣ (ಕಾಟಿ) ದಾಳಿಯಿಂದ ತಿಮ್ಮಪ್ಪ ಎಂಬ ವ್ಯಕ್ತಿ ಮೃತಪಟ್ಟಿರುತ್ತಾರೆ.
ಕಳೆದ ವಾರವಷ್ಟೇ ಕಾಡನೆ ದಾಳಿಯಿಂದ ಷಣ್ಮುಖ ಎಂಬವರು ಮೃತರಾಗಿದ್ದ ವಿಷಯ ಮಾಸುವ ಮುನ್ನವೇ ಮತ್ತೊಂದು ಬಲಿಯಾಗಿರುವುದು ವಿಷಾದನೀಯ.
ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಪರಿಹಾರದ ಚೆಕ್ ನೀಡಿ ಸಾಂತ್ವನ ಹೇಳಿದರು.




