
ಬಲೂಚಿಸ್ತಾನದ ಮೂರನೇ ಒಂದು ಭಾಗವನ್ನು ವಶಪಡಿಸಿಕೊಂಡಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ (BLA) ಹೇಳಿಕೊಂಡಿದೆ. ಪಾಕಿಸ್ತಾನಿ ಸೇನೆಯು ತನ್ನ ನೆಲೆಯನ್ನು ತ್ಯಜಿಸಿ ಪಲಾಯನ ಮಾಡಿದೆ ಎಂದು ಬಿಎಲ್‌ಎ ಹೇಳಿದೆ.
ಅಫ್ಘಾನಿಸ್ತಾನ-ಇರಾನ್ ಪಕ್ಕದ ಪ್ರದೇಶವನ್ನು ಬಿಎಲ್‌ಎ ಆಕ್ರಮಿಸಿಕೊಂಡಿದೆ. ಇದರ ಮಧ್ಯೆ ಪಾಕಿಸ್ತಾನದ ಹಲವು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯಂತಹ ಪರಿಸ್ಥಿತಿ ಇದೆ. ಜನರು ತಮ್ಮ ಮನೆಗಳಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ
ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಹೇಳಿಕೆ ಪ್ರಕಾರ, ಮಸ್ತುಂಗ್ ಮತ್ತು ಲಖಿಯಲ್ಲಿ ಪಾಕಿಸ್ತಾನಿ ಸೇನೆ ಮತ್ತು ಅದರ ಮಿತ್ರರಾಷ್ಟ್ರಗಳ ಮೇಲೆ ಆರು ಪ್ರತ್ಯೇಕ ದಾಳಿ ನಡೆಸಲಾಗಿದೆ. ಈ ದಾಳಿಗಳಲ್ಲಿ ಪಾಕಿಸ್ತಾನಿ ಸೇನೆ, ಅದರ ಗುಪ್ತಚರ ಮತ್ತು ಸಂವಹನ ಗೋಪುರಗಳನ್ನು ಐಇಡಿ ಮೂಲಕ ಸ್ಫೋಟಿಸಲಾಗಿದೆ ಎಂದು ತಿಳಿಸಿದೆ.
ಗುರುವಾರ ಬೆಳಗಿನ ಜಾವ 4 ಗಂಟೆಗೆ ಜಮ್ರಾನ್‌ನ ಧಾಂಗ್ ಪ್ರದೇಶದಲ್ಲಿ ಪಾಕ್ ಸೇನೆ ನಮ್ಮ ಮೇಲೆ ಅಟ್ಯಾಕ್ ಮಾಡಿತ್ತು. ಇದರಿಂದ ನಮ್ಮ ಸೇನಾ ಅಧಿಕಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು. ನಮ್ಮ ಮೇಲೆ ಗ್ರೆನೇಡ್ಗಳನ್ನು ಎಸೆದರು ಎಂದಿದೆ.
