
ಪಾಕಿಸ್ತಾನದ ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತ ರಣಭೀಕರ ಯುದ್ಧ ಸಾರಿದೆ. ಆ ಕಡೆಯಿಂದ ಒಂದು ಕ್ಷಿಪಣಿ ಬಂದ್ರೆ ಭಾರತದ ಕಡೆಯಿಂದ 10ಕ್ಕೂ ಹೆಚ್ಚು ಕ್ಷಿಪಣಿಗಳು ದಾಳಿ ಮಾಡಿವೆ. ಭಾರತದ ಭೀಕರ ದಾಳಿಗೆ ಪಾಕಿಸ್ತಾನದ 12ಕ್ಕೂ ಹೆಚ್ಚು ನಗರಗಳು ತತ್ತರಿಸಿ ಹೋಗಿವೆ.
ಮೊದಲಿಗೆ ಪಾಕಿಸ್ತಾನ ಜಮ್ಮು, ಪಠಾಣ್‌ಕೋಟ್, ಉದಮ್ ಪುರದಲ್ಲಿ ದಾಳಿ ಮಾಡಿತ್ತು. ಆದರೆ ಭಾರತೀಯ ಸೇನೆ ಪಾಕ್ ದಾಳಿಯನ್ನ ಸುಲಭವಾಗಿ ತಡೆದಿದ್ದು, ಭಾರತದಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ. ಪಾಕಿಸ್ತಾನದ ಹಲವು ಮಿಸೈಲ್, ಡ್ರೋಣ್‌ಗಳನ್ನು ಭಾರತ ಹೊಡೆದುರುಳಿಸಿದೆ ಎಂದು ಭಾರತೀಯ ಸೇನೆಯ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.
ಜಮ್ಮು ಕಾಶ್ಮೀರದ ಜೈಸಲ್ಮೇರ್‌ನಲ್ಲಿ ಓರ್ವ ಹಾಗೂ ಅಖ್ನೂರು ಸೆಕ್ಟರ್‌ನಲ್ಲಿ ಮತ್ತೋರ್ವ ಪಾಕಿಸ್ತಾನದ ಪೈಲಟ್ ಅನ್ನು ವಶಕ್ಕೆ ಪಡೆಯಲಾಗಿದೆ. F- 16 ಹೊಡೆದುರುಳಿಸಿದಾಗ ಪಾಕ್ ಪೈಲಟ್‌ನ್ನು ಭಾರತ ವಶಕ್ಕೆ ಪಡೆಯಲಾಗಿದೆ.
ಇಂದಿನ ರಾತ್ರಿಯ ಕಾರ್ಯಾಚರಣೆಯಲ್ಲಿ ಒಂದು F-16, ಎರಡು JF-17 ಫೈಟರ್ ಜೆಟ್‌ಗಳನ್ನು ಭಾರತ ಹೊಡೆದು ಉರುಳಿಸಿದೆ. ಜೈಸಲ್ಮೇರ್‌ನಲ್ಲಿ 30 ಮಿಸೈಲ್‌ಗಳನ್ನು ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಹೊಡೆದು ಉರುಳಿಸಿದೆ.
