
ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಉತ್ತರ, ಪಶ್ಚಿಮ ಮತ್ತು ಮಧ್ಯ ಭಾರತದಾದ್ಯಂತ 27 ವಿಮಾನ ನಿಲ್ದಾಣಗಳನ್ನು ಮೇ 10ರ ಬೆಳಿಗ್ಗೆ 5:29 ರವರೆಗೆ ಸ್ಥಗಿತಗೊಳಿಸಲಾಗಿದೆ.
ಇದು ವಿಮಾನ ಪ್ರಯಾಣದಲ್ಲಿ ಪ್ರಮುಖ ಅಡಚಣೆಗಳಿಗೆ ಕಾರಣವಾಗಿದೆ.ಪರಿಣಾಮವಾಗಿ, ಭಾರತೀಯ ವಿಮಾನಯಾನ ಸಂಸ್ಥೆಗಳು 430 ವಿಮಾನಗಳನ್ನು ರದ್ದುಗೊಳಿಸಿವೆ, ಇದು ದೇಶದ ಒಟ್ಟು ನಿಗದಿತ ವಿಮಾನಗಳಲ್ಲಿ ಸುಮಾರು 3 ಪ್ರತಿಶತದಷ್ಟಿದೆ.
ಪ್ರಯಾಣಿಕರು ತಮ್ಮ ವಿಮಾನ ಸ್ಥಿತಿಯನ್ನು ವಿಮಾನಯಾನ ಸಂಸ್ಥೆಗಳೊಂದಿಗೆ ದೃಢೀಕರಿಸಲು ಸೂಚಿಸಲಾಗಿದೆ. ೀ ನಡುವೆ ದೈನಂದಿನ ವಿಮಾನ ಸಂಚಾರದ ಸರಿಸುಮಾರು ಶೇ. 17ರಷ್ಟು ಸುಮಾರು 147 ಕ್ಕೂ ಹೆಚ್ಚು ವಿಮಾನಗಳನ್ನು ಪಾಕಿಸ್ತಾನ ರದ್ದುಗೊಳಿಸಿವೆ.
ಜಾಗತಿಕ ವಿಮಾನ ಟ್ರ್ಯಾಕಿಂಗ್ ಸೇವೆ ಫ್ಲೈಟ್‌ರಾಡಾರ್ 24 ಪ್ರಕಾರ, ಪಾಕಿಸ್ತಾನ ಮತ್ತು ಭಾರತದ ಪಶ್ಚಿಮ ಕಾರಿಡಾರ್, ಕಾಶ್ಮೀರದಿಂದ ಗುಜರಾತ್‌ವರೆಗಿನ ವಾಯುಪ್ರದೇಶವು ಗುರುವಾರ ನಾಗರಿಕ ವಿಮಾನಗಳಿಲ್ಲದೇ ಖಾಲಿಯಾಗಿತ್ತು.ಪಾಕಿಸ್ತಾನದಿಂದ ಕಾಶ್ಮೀರ ಮತ್ತು ಗುಜರಾತ್‌ವರೆಗಿನ ಭಾರತದ ಪಶ್ಚಿಮ ಪ್ರದೇಶದ ಮೇಲಿನ ವಾಯುಪ್ರದೇಶವು ನಾಗರಿಕ ವಾಯು ಸಂಚಾರದಿಂದ ಮುಕ್ತವಾಗಿತ್ತು.