
ನಿನ್ನೆ ಪುಲ್ವಾಮಾದ ಟ್ರಾಲ್ನಲ್ಲಿ ಭಾರತೀಯ ಸೇನೆ ಮೂವರು ಉಗ್ರರ ಬೇಟೆಯಾಡಿದೆ. ಸತತ 11 ಗಂಟೆಗಳ ಕಾರ್ಯಾಚರಣೆಯಲ್ಲಿ ಮೂವರು ಉಗ್ರರ ಸಂಹಾರ ಆಗಿದೆ. ಸೇನೆಯ ಕಾರ್ಯಾಚರಣೆ ರಣರೋಚಕ ಆಗಿತ್ತು. ಉಳಿದ ಉಗ್ರರ ಬೇಟೆಗೆ ಸೇನೆ ಕಾರ್ಯಾಚರಣೆ ಮುಂದುವರಿಸಿದೆ.
11 ಗಂಟೆ.. ಉಗ್ರರು ಫಿನೀಶ್..
ಉಗ್ರರ ಹುಟ್ಟಡಗಿಸಲು ಭಾರತೀಯ ಸೇನೆ ಕೆಲ್ಲರ್ ಆಪರೇಷನ್ ಮೂಲಕ ಕಿಲ್ಲಿಂಗ್ ಕಾರ್ಯ ಮುಂದುವರಿಸಿದೆ. ನಿನ್ನೆ ಜೈಷ್-ಎ-ಮೊಹ್ಮದ್ನ ಮೂವರು ಉಗ್ರರನ್ನು ರಣರೋಚಕ ರೀತಿಯಲ್ಲಿ ಶಿಕಾರಿ ಮಾಡಿದೆ. ಉಗ್ರ ಕೃತ್ಯವನ್ನು ಬೆಂಬಲಿಸುತ್ತಾ ದೇಶದ್ರೋಹಿಗಳಾಗಿರುವವರನ್ನು ಹೆಡೆಮುರಿ ಕಟ್ಟುತ್ತಿದೆ. ನಿನ್ನೆ ಪುಲ್ವಾಮಾದ ಟ್ರಾಲ್ನ ನಾದಿರ್ ಗ್ರಾಮದ ಮನೆಯೊಂದರಲ್ಲಿ ಮೂವರು ಅಡಗಿ ಕುಳಿತಿದ್ದ ಗುಪ್ತಚರ ಮಾಹಿತಿ ತಿಳಿಯುತ್ತಿದ್ದಂತೆ ಸುತ್ತುವರಿದಿದ್ದ ಸೇನೆ ಸುಮಾರು 11 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ಅಸುರರನ್ನು ಹೊಸಕಿ ಹಾಕಿದೆ.
ಆಪರೇಷನ್ ಕೆಲ್ಲರ್
ನಾದಿರ್ ಗ್ರಾಮ ಸುತ್ತುವರಿದಿದ್ದ CRPF ಬೆಟಾಲಿಯನ್ನ 110 ಪಡೆ ಮೊದಲಿಗೆ 200ಕ್ಕೂ ಹೆಚ್ಚು ಯೋಧರ ತಂಡ ಗ್ರಾಮವನ್ನ ಸುತ್ತುವರಿದಿತ್ತು. ನಂತರ ನಾದಿರ್ಗೆ ಎಂಟ್ರಿ ಕೊಟ್ಟಿದ್ದ ರಾಷ್ಟ್ರೀಯ ರೈಫಲ್ಸ್ನ ಸೈನಿಕರು ಸೇರಿ 250ಕ್ಕೂ ಹೆಚ್ಚು ಸೈನಿಕರು ಫ್ರಂಟ್ಲೈನ್ನಲ್ಲಿ ನಿಂತು ಕಾರ್ಯಾಚರಣೆ ನಡೆಸಿದ್ದರು. ರಾಷ್ಟ್ರೀಯ ರೈಫಲ್ಸ್ಗೆ ಜಮ್ಮುಕಾಶ್ಮೀರ್ ಸ್ಪೆಷಲ್ ಆಪರೇಷನ್ ಗ್ರೂಪ್ ಸಾಥ್ ನೀಡಿತ್ತು. ಸ್ಪೆಷಲ್ ಆಪರೇಷನ್ ಗ್ರೂಪ್ನಲ್ಲಿ 2,300 ಸ್ಪೆಷಲ್ ಟ್ರೇನ್ಡ್ ಪೊಲೀಸರಿದ್ದು 1 ಲಕ್ಷ ಪೊಲೀಸರ ನಡುವೆ ಈ 2,300 ಮಂದಿಯನ್ನ ಆಯ್ಕೆ ಮಾಡಲಾಗಿದೆ.
