
ಅರಸೀಕೆರೆ:- ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧಿ ಹೊಂದಿರುವ ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಶ್ರೀ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಡಾಕ್ಟರ್ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ನಿರ್ದೇಶನದಂತೆ ಮೇ 17ರಂದು ಲಿಂಗೈಕ್ಯ ಪರಮಪೂಜ್ಯಶಿವಲಿಂಗ ಮಹಾಸ್ವಾಮಿಜಿಯವರ138ನೇ ವರ್ಷದ ಪುಣ್ಯ ಸಂಸ್ಕರಣ ಧಾರ್ಮಿಕ ಕಾರ್ಯಕ್ರಮ ಮೇ 17ರಂದು ನಡೆಯಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಎಂ,ಎಸ್, ನಟರಾಜ್ ತಿಳಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂದು ಬೆಳಿಗ್ಗೆ ಬೆಳ್ಳಿ ಪಲ್ಲಕ್ಕಿಯಲ್ಲಿ ಶಿವಲಿಂಗ ಸ್ವಾಮೀಜಿಯವರ ಭಾವಚಿತ್ರ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ಕರಡೆ ವಾದ್ಯದೊಂದಿಗೆ ಜರುಗಲಿದೆ ಎಂದರು
ಬೆಳಿಗ್ಗೆ 11 ಗಂಟೆಗೆ ದೇವಾಲಯದ ಆವರಣದಲ್ಲಿ ಆಯೋಜಿಸಿರುವ ವೇದಿಕೆಯಲ್ಲಿ ಕೋಡಿಮಠ ಜಗದ್ಗುರುಗಳವರ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗದ್ಗುರು ಡಾ ಮುರುಗ ಮಲ್ಲಿಕಾರ್ಜುನ ರಾಜೇಂದ್ರ ಮಹಾಸ್ವಾಮಿಗಳು ಬೆಕ್ಕಿನ ಕಲ್ಮಠ ಆನಂದಪುರಂ ಶಿವಮೊಗ್ಗ ಇವರು ವಹಿಸಲಿದ್ದಾರೆ ಚಲನಚಿತ್ರ ನಟ ಎಸ್, ದೊಡ್ಡಣ್ಣ ಧರ್ಮೋಪನ್ಯಾಸ ನೀಡಲಿದ್ದು ಶ್ರೀ ರುದ್ರಮುನಿ ಸ್ವಾಮೀಜಿ ನಿರಂಜನ ಪೀಠ ಮಾಡಾಳು, ಜಯಚಂದ್ರ ಶೇಖರ ಸ್ವಾಮೀಜಿ ಕೇದಿಗೆ ಮಠ ಕೋಳಗುಂದ ಪ್ರಭು ಕುಮಾರ ಶಿವಾಚಾರ್ಯ ಸ್ವಾಮೀಜಿ, ದೊಡ್ಡ ಮಠ ಕೆ,ಬಿದರೆ ಜ್ಞಾನ ಪ್ರಭುಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ ಮೂರು ಕಳಸ ಮಠ ಕಡೂರು , ಶಶಿ ಶೇಖರಸಿದ್ದ ಬಸವ ಸ್ವಾಮೀಜಿ ಬೂದಿಹಾಳ ವಿರಕ್ತಮಠ ಡಿ,ಎಂ ಕುರ್ಕೆ, ಶ್ರೀ ತೇಜೇಶ್ವರಶಿವಾಚಾರ್ಯ ಸ್ವಾಮೀಜಿ ಕುಪ್ಪೂರ್ ಗದ್ದಿಗೆ ಮಠ , ಶ್ರೀ ಶಿವಪ್ರಕಾಶ್ ಶಿವಾಚಾರ್ಯ ಸ್ವಾಮೀಜಿ ಶ್ರೀ ಕರಿಸಿದ್ದೇಶ್ವರ ಮಠ ಹೊನ್ಲ ವಳ್ಳಿ, ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ದೊಡ್ಡಗುಣಿ, ಜನಪ್ರತಿನಿಧಿಗಳು ಸಾಹಿತಿಗಳು ವಿದ್ವಾಂಸರು ಭಾಗವಹಿಸಲಿದ್ದಾರೆ
ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕುಎಂದು ಅವರು ಮನವಿ ಮಾಡಿದ್ದಾರೆ ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನಪ್ಪ ಕೊಡ್ಲಿ ಬಸವರಾಜ್, ಎಂ ಸಿ ನಟರಾಜ್, ಮಾಡಾಳು ಶಿವಲಿಂಗಪ್ಪ, ಸೋಮಣ್ಣ, ಉಪಸ್ಥಿತರಿದ್ದರು
