
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ನೀಡಿದ ನ್ಯಾಯಾಧೀಶರ ನಾಲಗೆ ಕತ್ತರಿಸುವುದಾಗಿ ಕಾಂಗ್ರೆಸ್ ನಾಯಕ ವಿವಾದಿತ ಹೇಳಿಕೆ ನೀಡಿದ್ದಾರೆ.
ಸಂವಿಧಾನದ ಅಸ್ತಿತ್ವ ವನೇ ಬದಲಾಯಿಸಲು ಹೊರಟ
ರಾಹುಲ್ ಗಾಂದಿಯ ಅಭಿಮಾನಿ ನ್ಯಾಯದೀಶರ ನಾಲಿಗೆ ಕತ್ತರಿಸುವಷ್ಟು ಉದ್ದಟತನ ಹಿಂದೆ ಯಾರ ಕೈವಾಡ ವಿದೆ? ನ್ಯಾಯಾದೀಶರಿಗೆ ಇಲ್ಲದ ರಕ್ಷಣೆ
ಸಾಮಾನ್ಯ ಜನರಿಗಿದೆಯೇ?
ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹತೆ ಮಾಡಿರುವುದನ್ನು ವಿರೋಧಿಸಿ ತಮಿಳುನಾಡಿನ ದಿಂಡಿಗಲ್ ನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಸ್.ಸಿ., ಎಸ್.ಸಿ.
ಘಟಕದ ಜಿಲ್ಲಾಧ್ಯಕ್ಷ ಮಣಿಕಂಠನ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ ನೀಡಿದ ಗುಜರಾತ್ ನ್ಯಾಯಾಧೀಶರ ನಾಲಗೆ ಕತ್ತರಿಸುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನ್ಯಾಯಾಧೀಶ ವರ್ಮಾ ಅವರೇ ಕೇಳಿಸಿಕೊಳ್ಳಿ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ನಿಮ್ಮ ನಾಲಗೆ ಕತ್ತರಿಸಲಾಗುವುದು ಎಂದು ಹೇಳಿದ್ದಾರೆ. ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಮಣಿಕಂಠನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದಿಂಡಿಗಲ್ ಠಾಣೆ ಪೊಲೀಸರು ತಿಳಿಸಿದ್ದಾರೆ.