
ಹಾಸನ : ತಂತ್ರಜ್ಞಾನವು ಜಾಗತಿಕ ಮಟ್ಟದಲ್ಲಿ ನಿರ್ಮಾಣ ಯೋಜನೆ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಲ್ಲಿ ಮಹತ್ವದ ಬದಲಾವಣೆ ತರುವಲ್ಲಿ ಪ್ರಮುಖವಾಗಿದೆ ಎಂದು ಹಾಸನದ ಮಲ್ನಾಡ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಧ್ಯಕ್ಷರಾದ ಆರ್.ಟಿ. ದೇವೇಗೌಡರವರು ದಿನಾಂಕ 23.03.2026 ರಂದು ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವತಿಯಿಂದ ನಡೆದ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಸಿಲ್ಕ್ ಅಂಡ್ ಕನ್ಸಲೆನ್ಟೆನ್ಸಿ ಸೆಂಟರ್ ವತಿಯಿಂದ ಬಿಲ್ಡಿಂಗ್ ಇನ್ಫರ್ಮೇಷನ್ ಮಾಡಲಿಂಗ್ ಕುರಿತು ಮೂರು ದಿನಗಳ ಸಾಫ್ಟ್ವೇರ್ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಲ್ಡಿಂಗ್ ನಿರ್ಮಾಣ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಯ ಅಗತ್ಯತೆಯನ್ನು ತಂತ್ರಜ್ಞಾನವು ಜಾಗತಿಕ ಮಟ್ಟದಲ್ಲಿ ನಿರ್ಮಾಣ ಯೋಜನೆ ವಿನ್ಯಾಸ ಮತ್ತು ಕಾರ್ಯಕತಗೊಳಿಸುವಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ ಎಂದರು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಿಲ್ಡಿಂಗ್ ಇನ್ಫರ್ಮೇಷನ್ ಮಾಡಲಿಂಗ್ ಪ್ರಮುಖ ವಾಗಿದೆ ಮೂಲ ಸೌಕರ್ಯಗಳೊಂದಿಗೆ ಯೋಜನೆಗಳಲ್ಲಿ ಕಡ್ಡಾಯಗೊಳಿಸಿರುವುದರಿಂದ ಭಾರತದಲ್ಲಿಯೂ ಅದರ ಅಡವಳಿಕೆ ಕ್ರಮೇಣ ವೇಗ ಪಡೆಯುತ್ತಿದೆ ಎಂದು ತಿಳಿಸಿದರು.
ಇಂತಹ ತರಬೇತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಅಧ್ಯಯನ ತಿಳಿಯಲು ಹೆಚ್ಚಿನ ಮಹತ್ವವನ್ನು ಹೊಂದಿದೆ ಎಂದರು ಈ ತರಬೇತಿಯ ಉಪಯುಕ್ತವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು
ಹಿಂದೆ ಲ್ಲ ಈ ರೀತಿಯ ಅನುಕೂಲಗಳು ನಮ್ಮಲ್ಲಿ ಇರಲಿಲ್ಲ ಈಗಿನ ಕಾಲಕ್ಕನುಗುಣವಾಗಿ ತಂತ್ರಜ್ಞಾನ ಬೆಳೆದಂತೆ ಆಧುನಿಕ ತಂತ್ರಜ್ಞಾನಗಳೊಂದಿಗೆ ನಾವು ಸಾಗಬೇಕಾಗಿದೆ ಎಂದರು.
ಮಲ್ನಾಡ್ ಕಾಲೇಜ್ ಆಫ್ ಎಂಜಿನಿಯರಿಂಗ್ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಸ್ಕಿಲ್ & ಕನ್ಸಲ್ಟೆನ್ಸಿ ಸೆಂಟರ್ ಸಹಯೋಗದಲ್ಲಿ ನ್ಯಾವಿಸ್‌ವರ್ಕ್ಸ್ (ಬಿಲ್ಡಿಂಗ್ ಇನ್ಫರ್ಮೇಶನ್ ಮೋಡಲಿಂಗ್ – BIM) ಕುರಿತ ಮೂರು ದಿನಗಳ ಸಾಫ್ಟ್ವೇರ್ ತರಬೇತಿ ಕಾರ್ಯಕ್ರಮ ಯಶಸ್ವಿ ಯಾಗಲಿ ಎಂದರು.
ವಿದ್ಯಾರ್ಥಿಗಳಿಗೆ ಆಧುನಿಕ ನಿರ್ಮಾಣ ತಂತ್ರಜ್ಞಾನಗಳ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ನೀಡುವ ಜೊತೆಗೆ ಉದ್ಯಮಕ್ಕೆ ಸಂಬಂಧಿಸಿದ BIM ಉಪಕರಣಗಳ ಪರಿಚಯ ಮಾಡಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಕಾರ್ಯಕ್ರಮ ಯಶಸ್ವಿ ಅಗಲಿ ಎಂದರು .ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ ಹೆಚ್ ಜೆ ಅಮರೇಂದ್ರ ಮಾತನಾಡಿ ನಿರ್ಮಾಣ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಯ ಅಗತ್ಯತೆಯನ್ನು ಹೇಳಿದರು.
BIM ತಂತ್ರಜ್ಞಾನವು ಜಾಗತಿಕ ಮಟ್ಟದಲ್ಲಿ ನಿರ್ಮಾಣ ಯೋಜನೆ, ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ ಎಂದು ವಿವರಿಸಿದರು.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ BIM ಅನ್ನು ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಕಡ್ಡಾಯಗೊಳಿಸಲಾಗಿರುವುದರಿಂದ, ಭಾರತದಲ್ಲಿಯೂ ಅದರ ಅಳವಡಿಕೆ ಕ್ರಮೇಣ ಜಾರಿಗೊಳ್ಳುತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹೈದರಾಬಾದಿನ ನುರಿತ ತಂತ್ರಜ್ಞಾನದ ಉದಯ ಶಂಕರ್ ರಾಮಸ್ವಾಮಿ ಅವರು ತರಬೇತಿ ಕಾರ್ಯಕ್ರಮದ ರೂಪರೇಖೆಯನ್ನು ಪರಿಚಯಿಸಿ, ನ್ಯಾವಿಸ್‌ವರ್ಕ್ಸ್ ಸಾಫ್ಟ್‌ವೇರ್ ಅನ್ನು ಪ್ರಾಜೆಕ್ಟ್ ಇಂಟಿಗ್ರೇಶನ್, ಕ್ಲ್ಯಾಶ್ ಡಿಟೆಕ್ಷನ್ ಹಾಗೂ ಸಿಮ್ಯುಲೇಶನ್‌ಗಾಗಿ ಪರಿಣಾಮಕಾರಿಯಾಗಿ ಬಳಸುವ ವಿಧಾನಗಳನ್ನು ವಿವರಿಸಿದರು.
ಈ ತರಬೇತಿ ವಿದ್ಯಾರ್ಥಿಗಳಿಗೆ ಹಸ್ತಪ್ರಯೋಗದ ಅನುಭವವನ್ನು ಒದಗಿಸಿ, ನೈಜ ಪ್ರಾಜೆಕ್ಟ್‌ಗಳ ಕುರಿತು ಉತ್ತಮ ಅರಿವು ಬೆಳೆಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಲಿದೆ ಎಂದರು.
ಡಾ.ಎ. ಜೆ. ಕೃಷ್ಣಯ್ಯ ಪ್ರೋಫೇಸರ್ ಹಾಗೂ ಸ್ಕಿಲ್ ಕನ್ಸಲೇಟರ್ ವಿಭಾಗದ ಮುಖ್ಯಸ್ಥರು ಮಾತಾನಾಡಿ ಇಂತಹ ಕಾರ್ಯಕ್ರಮಗಳು ಶೈಕ್ಷಣಿಕ ಅಧ್ಯಯನ ಮತ್ತು ಉದ್ಯಮದ ಅವಶ್ಯಕತೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಮಹತ್ವದ ಪಾತ್ರವಹಿಸುತ್ತವೆ. ಈ ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದ್ದು ನಮ್ಮ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿಗಳಿಗೆ ಯಶಸ್ವೀ ಹಾಗೂ ಉಪಯುಕ್ತ ತರಬೇತಿ ಕಾರ್ಯಕ್ರಮವಾಗಿದೆ, ಅವರಿಗೆ ಹೆಚ್ಚಿನ ಜ್ಞಾನ ಅರಿಯಲು ಹಾಗೂ ಭವಿಷ್ಯದ ನಿರ್ಮಾಣ ಕ್ಷೇತ್ರದ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಲು ಸಹಕಾರಿಯಾಗಲಿದೆ, ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಖಜಾಂಚಿಗಳಾದ ಎಚ್.ಡಿ.ಪಾರ್ಶನಾಥ್, ಪ್ರೊಫೆಸರ್ ಡಾ. ಎಚ್.ಎಸ್. ನರಸಿಂಹನ್ ಉಪಸ್ಥಿತರಿದ್ದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಸುಮನಾ ಜೈ ಪ್ರಕಾಶ್ ರವರು ಕಾರ್ಯಕ್ರಮದ ಸ್ವಾಗತವನ್ನು ನೆರವೇರಿಸಿದರು.
ಕಾರ್ಯಕ್ರಮದ ಸಂಯೋಜಕರುಗಳಾದ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಡಾ. ಕೆ. ಸಿ.ಮನು, ಪ್ರೊಫೆಸರ ಸಿ ಮಧುಶ್ರೀ, ಅಸೋಸಿಯೆಟ್ ಪ್ರೊಫೆಸರ್ ಬಿ.ಎಸ್. ಶಮನಾ ಮುಂತಾದವರು, ಹಾಗೂ ತರಭೇತಿ ಪಡೆಯುವ ವಿದ್ಯಾರ್ಥಿಗಳು ಸಿವಿಲ್ ವಿಭಾಗದ ಪ್ರೋಫೇಸರ್ ಗಳು ಸಹ ಪ್ರೊಫೇಸರ್ ಗಳು ಹಾಗೂ ನೌಕರ ಬಾಂಧವರು ಭಾಗವಹಿಸಿದ್ದರು.



