ಸಕಲೇಶಪುರ : ಶ್ರೀ ರಾಮನವಮಿ ನಿಮಿತ್ತ ಪಟ್ಟಣದ ಕುಶಾಲನಗರ ಬಡಾವಣೆಯ ಒಕ್ಕಲಿಗರ ಸಮುದಾಯ ಭವನದ ಆವರಣದಲ್ಲಿ ಸಕಲೇಶಪುರ ತಾಲ್ಲೂಕಿನ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ರಾಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಬೆಳಗ್ಗೆ 10 ಗಂಟೆಗೆ ಶ್ರೀ ರಾಮತರಕ ಮಂತ್ರದೊಂದಿಗೆ ಪೂಜೆ ಪ್ರಾರಂಭವಾಗಿ 11:30 ಕ್ಕೆ ಸಮಾಪ್ತಿಗೊಂಡಿತು. ಪಾನಕ – ಕೊಸಂಬರಿ ಸೇರಿದಂತೆ ಮದ್ಯಾಹ್ನ ಲಘು ಉಪಹಾರದ ವ್ಯವಸ್ಥೆ ಮಾಡಿದ್ದ ಕಾರ್ಯಕರ್ತರು ಮದ್ಯಾಹ್ನ 2 ಗಂಟೆ ಸುಮಾರಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಯಿತು.

ಅಕ್ಷಯ್ ಟ್ರೆಡಿಂಗ್ ಕಂಪೆನಿ ಮುಖ್ಯಸ್ಥ ಚಂದ್ರಶೇಖರ್ ಸೇರಿದಂತೆ ಈ ಕಾರ್ಯಕ್ರಮದ ವ್ಯವಸ್ಥೆಯನ್ನು ಹಿಂದೂ ಹಿತರಕ್ಷಣಾ ವೇದಿಕೆಯ ದಿಲೀಪ್ ಕುಶಾಲನಗರ. ರವಿ ಹೆಬ್ಬಸಾಲೆ. ವಿಕಾಸ್ ಸೇರಿದಂತೆ ಹಿಂದೂ ಮುಖಂಡ ರಘು ಸಕಲೇಶಪುರ. ಕೌಶಿಕ್ ಹೆಚ್.ಎಂ. ಶಿವು ಜಿಪ್ಪಿ. ಪ್ರದೀಪ್ ಪೂಜಾರಿ. ಜತೀನ್ ಕುಮಾರ್. ಶ್ರಿಜೀತ್ ಗೌಡ. ವಿಜಿತ್ ಗೌಡ. ಸಂತೋಷ್ ಸೇರಿದಂತೆ ಅನೇಕ ಕಾರ್ಯಕರ್ತರು ಪ್ರಮುಖರಾಗಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *