
॥ ಶ್ರೀಗುರು ನಿರ್ವಾಣಸ್ವಾಮಿ ಪ್ರಸನ್ನ ॥ ॥ ಶ್ರೀ ಚನ್ನಿಗರಾಯ ಸ್ವಾಮಿ ಪ್ರಸನ್ನ
ಆಲೂರು : ಶ್ರೀ ಮಡೇ ಮಾರಮ್ಮ ದೇವಿ ಮತ್ತು ಶ್ರೀ ವೀರಭದ್ರೇಶ್ವರ ಕೆಂಚರಾಯಸ್ವಾಮಿಯವರ ಜಾತ್ರಾಮಹೊತ್ಸವ.ಆಲೂರು ತಾಲ್ಲೂಕು ಗೇಕರವಳ್ಳಿ ಗ್ರಾಮದಲ್ಲಿ ದಿನಾಂಕ : 29=03-2026 ಭಾನುವಾರದಿಂದ ದಿನಾಂಕ 31-03-2026ನೇ ಭಾನುವಾರದವರೆಗೂ ಶ್ರೀ ದೇವಿಯವರ ಜಾತ್ರಾಮಹೋತ್ಸವವು ಜರುಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ
ಕಾರ್ಯಕ್ರಮದ ವಿವರದಿನಾಂಕ : 29-03-2026 ನೇ ಭಾನುವಾರ ಶ್ರೀ ಮಡೆ ಮಾರಮ್ಮದೇವಿ ಹಾಗೂ ವೀರಭದ್ರೇಶ್ವರ ಕೆಂಚರಾಯಸ್ವಾಮಿಯವರಿಗೆ ವಿಶೇಷ ಪೂಜೆ ಹೂವಿನ ಅಲಂಕಾರ ಅಭಿಷೇಕಪೂಜೆ ಹೋಮ ಹವನ ಹಾಗೂ ಮಹಾ ಮಂಗಳಾರತಿ ನಡೆಸಲಾಗುತ್ತದೆ ನಂತರ ಅದೇ ದಿನ ರಾತ್ರಿ ಗ್ರಾಮದ ದೊಡ್ಡ ಕೆರೆಗೆ ತೆರಳಿ ದೇವರುಗಳಿಗೆ ಗಂಗಸ್ಥಾನದೊಂದಿಗೆ ಅಡ್ಡೆ ಪಲ್ಲಕ್ಕಿ ಮುಕಾಂತರ ಗ್ರಾಮಕ್ಕೆ ಬರಮಾಡಿಕೊಂಡು ಗ್ರಾಮದಲ್ಲಿ ಅಡ್ಡೆ ಪಲ್ಲಕ್ಕಿ ಉತ್ಸವ ಹಾಗೂ ಚಾಮನ ಕುಣಿತ ಇರುತ್ತದೆ ಮತ್ತು ರಾತ್ರಿ 10 ಗಂಟೆಗೆ ಮಡೆ ಹಾಗೂ ಕೊಂಡದ ಕಗ್ಗಲಿ ಸೌದೆಗೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ.
ದಿ :30-03-26 ನೇ ಸೋಮವಾರ ಮುಂಜಾನೆ 7.30 ರಿಂದ 9 ಗಂಟೆಯವರೆಗೆ ಕೆಂಡೋತ್ಸವ ಹಾಗೂ ಭಕ್ತಾಧಿಗಳಿಗೆ ಕೆಂಡ ಹಾಯುವ ಕಾರ್ಯಕ್ರಮ ನಡೆಯಲಿದ್ದು ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ ದಿ : 31 ನೇ ಮಂಗಳವಾರದಂದು ಶ್ರೀ ಮಡೇ ಮಾರಮ್ಮನವರ ಬಂಟರಾದ ಶ್ರೀ ಸರಪಳಿ ಕೆಂಚರಾಯಸ್ವಾಮಿಯವರ ಭೂತನ ಸೇವೆ ಇರುತ್ತದೆ
ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾಧಿಗಳು, ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಸ್ಥರುಗಳುಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು ಮನ ಧನವನ್ನು ಸಮರ್ಪಿಸಿ ಶ್ರೀ ಮಡೇ ಮಾರಮ್ಮ ದೇವಿ ಮತ್ತುವೀರಭದ್ರೇಶ್ವರ ಹಾಗೂ ಕೆಂಚರಾಯ ಸ್ವಾಮಿಯವರ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿ ಹಾಗೂ ಸರ್ವರಿಗೂ ಆದರದ ಸುಸ್ವಾಗತ ಕೋರುವವರು ಗೇಕರವಳ್ಳಿ ಹುಲ್ಲಳ್ಳಿ ಗ್ರಾಮಸ್ಥರು ಹಾಗೂ ಅರ್ಚಕರುಗಳು ಮತ್ತು ಯುವಕರು..
