
ಸಕಲೇಶಪುರ : ಚೆಸ್ಕಾಂ (KEB) ಸಕಲೇಶಪುರ ವಿಭಾಗೀಯ ಕಛೇರಿಯಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಬಾಬಾ ಸಾಹೇಬ್, ಡಾ|| ಬಿ.ಆರ್.ಅಂಬೇಡ್ಕರ್ ರವರ 135ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕ್ರಾಂತಿ ಗೀತೆ ಹಾಡಿದ ಹೆಚ್.ಬಿ.ಸಂಜಯ್ ಕಿರಿಯ ಪವರ್ ಮ್ಯಾನ್ ಹಾನುಬಾಳು ಶಾಖೆ ಇವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಸಹಾಯಕ ಕಾರ್ಯಪಾಲಕ ಇಂಜನಿಯರ್ (ಪ್ರ) ಆದ ನಿರಂಜನ್ ಕೆ.ಆರ್ ರವರು ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಕ.ವಿ.ಪ್ರ.ನಿ.ನೌಕರರ.ಸಂಘ (659)ಸಕಲೇಶಪುರ ವಿಭಾಗದ ಅಧ್ಯಕ್ಷರಾದ ಚನ್ನಬಸಪ್ಪ ಎಂ.ರಾಮಣ್ಣನವರ್ ರವರು ಹಾಗೂ ವಿಭಾಗೀಯ ಉಗ್ರಾಣ ಪಾಲಕರಾದ ಶ್ರೀ ಜಿ.ಎಸ್.ರಮೇಶ್ ರವರು ಮತ್ತು ಕ.ವಿ.ಪ್ರ.ನಿ.ನೌ.ಸಂಘದ ಸ್ಥಳೀಯ ಸಮಿತಿಯ ಉಪಾಧ್ಯಕ್ಷರಾದ ಮಂಜೇಗೌಡ ರವರು ಮತ್ತು ಸಹಕಾರ್ಯದರ್ಶಿಗಳಾದ ವೈ.ಪಿ.ಸೋಮಶೇಖರ್ ರವರು ಹಾಗೂ ಖಜಾಂಚಿಯಾದ ಮಧುಸೂದನ್ ರವರು ನಿರ್ದೇಶಕರುಗಳಾದ ರಂಗನಾಥ ಬಿ.ಎಸ್ ಹಾಗೂ ಆರ್. ಸುರೇಶಕುಮಾರ ರವರು ಹಾಗೂ ಹಾನುಬಾಳು ಕಿರಿಯ ಇಂಜನಿಯರ್ ಆದ ಕೆ.ನಾಗರಾಜ ರವರು ಮುಖ್ಯಭಾಷಣಕಾರರಾಗಿ ಮಾತನಾಡಿದರು, ಹಾಗೂ ಬಾಳ್ಳುಪೇಟೆ ಕಿರಿಯ ಇಂಜನಿಯರ್ ಆದ ಎನ್.ಸಿ.ಲೋಕೇಶ್ ರವರು ಮತ್ತು ಅರೇಹಳ್ಳಿ ಕಿರಿಯ ಇಂಜನಿಯರ್ ಆದ ಎ.ಸಿ.ಚಂದ್ರಶೇಖರ್ ರವರು ಮತ್ತು ಅರೆಹಳ್ಳಿ ಶಾಖೆಯ ಹಿರಿಯ ಸಹಾಯಕ ಬಿ.ಎ.ಮಂಜುನಾಥ ರವರು ಮತ್ತು ಸ್ನೇಹ ಜೀವ ಸಾಹಿತಿಗಳಾದ ಸಮುದ್ರವಳ್ಳಿ ವಾಸು ರವರು ಪ್ರಾಸ್ಥಾವಿಕವಾಗಿ ಮಾತನಾಡಿದರು ಸಮಸ್ತ ಮಹಿಳೆಯರ ಪರವಾಗಿ ಶ್ರೀ ಮತಿ ಜ್ಯೋತಿ ಪಿಂಟೋ ರೋಷನ್ ರವರು ಮತ್ತು ಕಲ್ಯಾಣ ಸಂಸ್ಥೆಯ ಸಹ ಕಾರ್ಯದರ್ಶಿ ಹುಚ್ಚಪ್ಪ.ರಾಠೋಡ್ ರವರು ವೇದಿಕೆಯಲ್ಲಿದ್ದರು ಹಾಗೂ ಬಾಳ್ಳುಪೇಟೆ ಶಾಖೆಯ ಅಣ್ಣಪ್ಪ .ಡಿ.ಇ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.


