
ಬೇಲೂರು : ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಗೂಡ್ಸ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲಿ ಮೃತಪಟ್ಟಿದ್ದು ಬೇಲೂರಿನ ಶೆಟ್ಟಿಗೆರೆ, ಕನ್ನಯಕನಹಳ್ಳಿ ಉದ್ದೇವು ಗ್ರಾಮದಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಬೇಲೂರು ತಾಲೂಕಿನ ಶೆಟ್ಟಿಗೆರೆ ಗ್ರಾಮದ ಲೋಲಾಕ್ಷಿ, ಕುಮಾರ್, ದೀಪಿಕಾ, ಸುನಿಲ್, ಯಶೋಧ ಮತ್ತು ಬೆಳ್ಳಿ ಎಂದು ಗುರುತಿಸಲಾಗಿದೆ. ಇವರು ನಿನ್ನೆ ಮಧ್ಯಾಹ್ನ ತಮ್ಮ ಗ್ರಾಮದಿಂದ ದೇವಸ್ಥಾನಕ್ಕೆ ತೆರಳಲು ಸರಕು ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ.
ಮಂತ್ರಾಲಯದ ಸಮೀಪ ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಗೂಡ್ಸ್ ವಾಹನ ನುಜುಗುಜ್ಜಾಗಿದೆ ಎನ್ನಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ದುಃಖದ ವಾತಾವರಣವನ್ನು ನಿರ್ಮಿಸಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೇಲೂರು ತಾಲೂಕಿನ 3 ಗ್ರಾಮದ ಸಂಬಂಧಿಕರ ಕುಟುಂಬಗಳು ಒಟ್ಟಿಗೆ ಮನೆಯನ್ನು ಬೀಗ ಹಾಕಿ ದೇವರ ದರ್ಶನಕ್ಕಾಗಿ ಹೊರಟಿದ್ದರೆಂದು ತಿಳಿದುಬಂದಿದೆ. ಆದರೆ ದುರಾದೃಷ್ಟವಶಾತ್ ಮಂತ್ರಾಲಯದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರ ಮಾಹಿತಿ..1. ಕುಮಾರ್ s/೦ ದಿವಂಗತ ಯಲ್ಲಯ್ಯ, 50. ಕನ್ನಯಕನಹಳ್ಳಿ ಗ್ರಾಮ, ಬೇಲೂರು ತಾಲೂಕು
2. ದೀಪಿಕಾ ವೀಣಾ w/o ರಾಜೇಶ್, ಪ್ರಾಯ 42 ವರ್ಷ, ವರ್ಷ, ಕನ್ನಯಕನಹಳ್ಳಿ ಗ್ರಾಮ, ಬೇಲೂರು
3. ಸುನೀಲ್ s/o ಕುಮಾರ್, ಪ್ರಾಯ 40 ವರ್ಷ, ಶೆಟ್ಟಿಗೆರೆ ಗ್ರಾಮ, ಬೇಲೂರು ತಾಲ್ಲೂಕು
4. ಯಶೋದಾ @ತಾಯಮ್ಮ w/o ಕುಮಾರ್, ಪ್ರಾಯ.60 ವರ್ಷ, ಶೆಟ್ಟಿಗೆರೆ ಗ್ರಾಮ, ಬೇಲೂರು
5. ಬೆಳ್ಳಿ D/o ದೀಪಿಕಾ ವೀಣಾ, ವಯಸ್ಸು 5 ವರ್ಷ. ಕನ್ನಯಕನಹಳ್ಳಿ ಗ್ರಾಮ, ಬೇಲೂರು ತಾಲ್ಲೂಕು
6. ಲೋಲಾಕ್ಷಿ , ಶೆಟ್ಟಿಗೆರೆ ಗ್ರಾಮ, ಬೇಲೂರು ತಾಲೂಕು
7. ಮೀನಾಕ್ಷಿ w/o ರಂಗ, ಉದ್ದೇವು ಗ್ರಾಮ, ಚಿಕ್ಕಮಗಳೂರು8. ಪುಟ್ಟಮ್ಮ w/o ಜಗನಾಥಪ್ಪ, ವಯಸ್ಸು. 55 ವರ್ಷ, ಉದ್ದೇವು, ಚಿಕ್ಕಮಗಳೂರು ಜಿಲ್ಲೆ,
