
ಸಕಲೇಶಪುರ – ಸಕಲೇಶಪುರದ ಚಿಕ್ಕಸತ್ತಿಗಾಲ್ ಗ್ರಾಮದಲ್ಲಿ ಕಳೆದ 8 ರಿಂದ 10 ದಿನದಿಂದ ಬಕ್ರೀದ್ ಗೆ ಕುರ್ಬಾನಿ ನೀಡಲು ಸತ್ತಿಗಾಲ್ ಗ್ರಾಮದಲ್ಲಿ ಓಡಾಡಿಕೊಂಡಿದ್ದ ಗ್ರಾಮದ ಹೋರಿ ಗೋವನ್ನು ಕದ್ದು ಮೇವು ನೀರು ನೀಡದೇ ಬಿಗಿಯಾದ ಹಗ್ಗದಲ್ಲಿ ಕಾಫಿ ಗಿಡಕ್ಕೆ ಕಟ್ಟಿ ಹಾಕಿ ಮೇಯಲು ಆಗದ ರೀತಿ ಚಿತ್ರಹಿಂಸೆ ನೀಡಿದ್ದು ಚಿಕ್ಕಸತ್ತಿಗಾಲ್ ಗ್ರಾಮದಲ್ಲಿ ಇರುವ ತೊಟ್ಟಿ ಮನೆ ಹೋಂ ಸ್ಟೇ ಪಕ್ಕಕ್ಕೆ ಹೊಂದಿ ಕೊಂಡಂತೆ ಇರುವ ಅಯಾಜ್ ಮತ್ತು ಸೈಯ್ಯದ್ ಮಾಲೀಕತ್ವದ ತೋಟದಲ್ಲಿ ಕಂಡು ಬಂದಿರುತ್ತದೆ.
ಹೋಂ ಸ್ಟೇ ಮಾಲೀಕ ಸೈಯ್ಯದ್ ಮುಫಿಜ್ ಗೋವುಗಳನ್ನು ಕಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ತನಿಖೆಗೆ ಆದೇಶಿಸಿ ತಪ್ಪಿತಸ್ತರ ಮನೆ ಹಾಗೂ ಪರವಾಣಿಗೆ ಇಲ್ಲದೆ ಅಕ್ರಮವಾಗಿ ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿರುವ ಹೋಂಸ್ಟೇ ತೆರವಿಗೆ ಆದೇಶಿಸಬೇಕು ಎಂದು ಹಿಂದೂ ಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಟ್ಟಣದ ಹಳೇ ಬಸ್ ನಿಲ್ದಾಣದಿಂದ ಪ್ರತಿಭಟನೆ ನಡೆಸಿ ತಾಲ್ಲೂಕು ಆಡಳಿತದ ಗಮನ ಸೆಳೆದರು.
ಚಿಕ್ಕಸತ್ತಿಗಾಲ್ ಗ್ರಾಮದ ತೊಟ್ಟಿಲು ಮನೆ ಹೋಂಸ್ಟೇಗೆ ಹೊಂದಿಕೊಂಡಂತೆ ಇರುವ ಕಾಫಿ ತೋಟದ ಮಾಲೀಕರಾದ ಸಯೀದ್ ಮತ್ತು ಅಯಾಜ್ ತೋಟದಲ್ಲಿ ಗೋವುಗಳನ್ನ ಕಟ್ಟಿರೋದು ಹಲವು ಅನುಮಾನ ಹುಟ್ಟಿಸಿದೆ. ಇದರ ಜೊತೆ ತೋಟದಲ್ಲಿದ್ದ 4 ಚಿಕ್ಕ ಹೋರಿಗಳ ಜೊತೆ ದೊಡ್ಡ ನಂದಿ ಹೋರಿಯನ್ನು ಕಟ್ಟಿ ಹಾಕಿರುವ ಖಚಿತ ಮಾಹಿತಿ ಮೇರೆಗೆ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ದಿನಾಂಕ 27.05.26 ರಂದು ಮತ್ತೆ ಖಚಿತ ಪಡಿಸಿಕೊಂಡು ತೊಟ್ಟಿ ಮನೆ ಹೋಂ ಸ್ಟೇ ಬಳಿ ಕಟ್ಟಿ ಹಾಕಿದ್ದ ಹೋರಿಯನ್ನು ನೋಡಿ ಭಾವಚಿತ್ರದೊಂದಿಗೆ ಪೊಲೀಸ್ ಇಲಾಖೆ ಮಾನ್ಯ ಪೋಲಿಸ್ ವರಿಷ್ಠಾಧಿಕಾರಿ ಮತ್ತು ಸಕಲೇಶಪುರ ಉಪವಿಭಾಗದ ಡಿವೈಎಸ್ಪಿ ಹಾಗೂ ಸಕಲೇಶಪುರ ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ಮಾಹಿತಿ ನೀಡಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಿಬ್ಬಂದಿಗಳೊಂದಿಗೆ ಅಕ್ರಮವಾಗಿ ಕಟ್ಟಿ ಹಾಕಿದ್ದ ಜಾಗಕ್ಕೆ ಹೋಗುವ ಸಮಯದಲ್ಲಿ ದೊಡ್ಡ ಹೋರಿಯನ್ನ ಹಿಡಿಯಲು ಆಗಿರುವುದಿಲ್ಲ ಹೋರಿ ಮೇವು ನೀರು ಇಲ್ಲದೆ ಹೈರಾಣಾಗಿ ಸಿಕ್ಕ ಸಿಕ್ಕವರ ಮೇಲೆ ಎರಗುತಿತ್ತು.
ಅಲ್ಲಿದ್ದ ಹೋರಿಗಳನ್ನ ಬೇರೆಕಡೆಗೆ ಸಾಗಿಸಿದ್ದು ಅವುಗಳನ್ನ ಹತ್ಯೆ ಮಾಡಿದ್ದಾರೆ ಉಳಿದ ದೊಡ್ಡ ಹೋರಿ ಗೋಶಾಲೆಗೆ ಬಿಡಲು ವಾಹನಕ್ಕೆ ಹತ್ತಿಸಲು ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಹರಸಾಹಸ ಮಾಡಿದರು.
ಆದರೆ ಮೇವು ನೀರು ಇಲ್ಲದೆ ಸಂಪೂರ್ಣ ಬಲಹೀನವಾಗಿದ್ದರಿಂದ ಕುಸಿದು ಬೀಳುತಿದ್ದ ದೊಡ್ಡ ಹೋರಿಯನ್ನ ತುರ್ತು ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ತೊಟ್ಟಿಲು ಮನೆ ಹೋಂ ಸ್ಟೇ ಮಾಲೀಕ ಸೈಯ್ಯದ್ ಮುಫೀಜ್ ಎಂಬುವರ ಜಾಗ ಹತ್ತಿರದ ಜಾಗವಾಗಿತ್ತು ಅದು ನನ್ನ ಜಾಗ ಇಲ್ಲಿ ಹೋಗಬಾರದು ಎಂದು ತಡೆ ಒಡ್ಡಿ ಕಿರಿಕ್ ಮಾಡಿದ್ದೂ ಅಲ್ಲದೆ ಹೋಗಲು ಬಿಡದೆ ದೌರ್ಜನ್ಯ ಮಾಡಿ ದೊಡ್ಡ ನಂದಿ ಹೋರಿ 2.5 ಕಿಲೋಮೀಟರ್ ಸುತ್ತಿ ನಂತರ ಪಿಕಪ್ ವಾಹನದಲ್ಲಿ ಹಾಕಿಕೊಂಡು ಬರುವಾಗ ನೀತ್ರಹೀನವಾಗಿದ್ದ ಹೋರಿ ಚಿಕಿತ್ಸೆ ತಡವಾದ ಕಾರಣ ಸಾವನ್ನಪ್ಪಿತು.
ಪೊಲೀಸ್ ಸಿಬ್ಬಂದ್ದಿಗಳು ಕಾನೂನು ಪಾಲಿಸಲೂ ಮತ್ತು ಚಿಕಿತ್ಸೆ ಕೊಡಿಸಲು ವಿಫಲರಾಗಿದ್ದು ಮತ್ತು ತಕ್ಷಣ ವಾಹನ ಬರಲು ವ್ಯವಸ್ಥೆ ಮಾಡದೆ ಹತ್ತಿರದ ಜಾಗವನ್ನ ಬಿಡಿಸಲು ವಿಫಲರಾಗಿದ್ದು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಪೊಲೀಸ್ ಇಲಾಖೆ ವಿಫಲವಾಗಿದ್ದು ಸರಿಯಷ್ಟೆ. ಪ್ರಭಾವಿ ವ್ಯಕ್ತಿ ಎಂದು ಬಿಂಬಿಸಿಕೊಂಡು ಸಕಲೇಶಪುರ ನಗರದ ಕುಶಾಲನಗರ ಬಡಾವಣೆಗೆ ಕುರ್ಬಾನಿ ಮಾಂಸ ನೀಡುತ್ತೇನೆ ಎಂಬ ಮುಫೀಜ್ ಎಂಬುವರ ಹೇಳಿಕೆ ಮತ್ತು ಅವರ ಹೋಂ ಸ್ಟೇಗೆ ಹೊಂದಿಕೊಂಡಂತೆ ಇರುವ ತೋಟದಲ್ಲಿ ಕಟ್ಟಿ ಹಾಕಿದ್ದು ನಂದಿ ಗೋವು ಸಾವಿನ ಹಿಂದೆ ನೇರವಾಗಿ ಮುಫೀಜ್ ಎಂಬುವರ ಕೈವಾಡವಿದೆ ಎಂಬುದು ತಿಳಿದು ಬಂದಿರುತ್ತದೆ.
ಆದ್ದರಿಂದ ದಯಮಾಡಿ ಗೋಹತ್ಯೆ ನಿಷೇಧ ಕಾನೂನು ಕರ್ನಾಟಕದಲ್ಲಿ ಜಾರಿಯಲ್ಲಿದ್ದರೂ ಸಹ ಪ್ರಚೋದನೆ ಕೋಮುಗಲಭೆ ಮಾಡಬೇಕು ಎಂಬ ದುರುದ್ದೇಶದಿಂದ ನಂದಿ ಹೋರಿಯನ್ನ ಕದ್ದು ಹಿಂಸಾಕೃತವಾಗಿ ಕಟ್ಟಿ ಹಾಕಿ ಹತ್ಯೆ ಮಾಡಿ ಕುರ್ಬಾನಿ ಮಾಂಸ ಮಾಡಿ ಹಂಚುತ್ತೇನೆ ಎಂಬುದು ಕಾನೂನು ಬಾಹಿರವಾಗಿದ್ದು ಇದರ ತನಿಖೆ ಪಾರದರ್ಶಕ ಮತ್ತು ಪ್ರಾಮಣಿಕವಾಗಿ ಆಗಬೇಕು ಮತ್ತು ವರದಿಯನ್ನು ದಿನ ಪಡೆದು ಸೂಕ್ತ ಕಾನೂನು ಕ್ರಮ ಮತ್ತು ಶಿಕ್ಷೆ ಆಗುವ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಪ್ರತಿಭಟನೆ ನಡೆಸಿ ಸಕಲೇಶಪುರ ತಾಲ್ಲೂಕಿನ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ರಘು ಸಕಲೇಶಪುರ ಹಿಂದೂ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಮಂಜುನಾಥ್ ಕಬ್ಬಿನಗದ್ದೆ. ಕೌಶಿಕ್ ಹೆಚ್.ಎಂ. ಶಶಿಧರ್ ನಡಹಳ್ಳಿ. ಕಾಡುಮನೆ ವಿಜಿಕುಮಾರ್. ದುಶ್ಯಾಂತ್ ಗೌಡ. ಶಿವು ಜಿಪ್ಪಿ. ದೀಪಕ್. ಸಂತೋಷ್. ರವಿ ಹೆಬ್ಬಸಾಲೆ. ಶ್ರೀಜಿತ್ ಗೌಡ. ಹರ್ಷ ಸೇರಿದಂತೆ ಇತರರಿದ್ದರು.




