ಸಕಲೇಶಪುರ : ಅತಿ ಶೀಘ್ರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆಯಲಾಗಿದೆ ಎಂದು ಉಪವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ ಹೇಳಿದರು.

ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ೨೦೨೬ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಶೀಘ್ರದಲ್ಲಿ ಆರಂಭವಾಗಲಿದ್ದು ಮತದಾರರಾಗಲು ಕೆಲವೊಂದು ಮಾನದಂಡಗಳಿದೆ. ಮತದಾರ ಭಾರತದ ಪ್ರಜೆಯಾಗಿರಬೇಕು. ೧೮ ವರ್ಷಕ್ಕಿಂತ ಕಡಿಮೆಯಿರಬಾರದು, ಆ ಮತಗಟ್ಟೆಯ ಸಾಮಾನ್ಯ ನಿವಾಸಿಯಾಗಿರಬೇಕು. ಮಾನಸಿಕ ಅಸ್ವಸ್ಥನಾಗಿರಬಾರದು. ಭ್ರಷ್ಟಚಾರ ಮತ್ತು ಚುನಾವಣೆಗೆ ಸಂಬಂಧಿಸಿದ ಇತರ ಅಪರಾಧಗಳ ಸಂಬಂದ ಮತ ಚಲಾಯಿಸಲು ಅನರ್ಹರಾಗಿರಬಾರದು.

೨೦-೦೬-೨೦೨೬ರಿಂದ ೨೯-೦೬-೨೦೨೬ರ ವರೆಗೆ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಕುರಿತು ಬಿಎಲ್‌ಓ ಹಾಗೂ ಬಿಎಲ್‌ಎ ಗಳಿಗೆ ತರಬೇತಿ, ೩೦-೦೬-೨೦೨೬ರಿಂದ ೨೯-೦೭-೨೦೨೬ರ ವರೆಗೆ ಬಿ.ಎಲ್.ಓಗಳಿಂದ ಮನೆ ಮನೆಗೆ ಭೇಟಿ ಪ್ರಕ್ರಿಯೆ ಇದ್ದು ದಿನಾಂಕ ೫-೦೮-೨೦೨೬ ರಿಂದ ೪-೦೯-೨೦೨೬ರವರೆಗೆ ಮತದಾರರ ಸೇರ್ಪಡೆ ಕೈಬಿಡುವಿಕೆಗೆ ವಿರುದ್ದ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ.

೦೭-೧೦-೨೦೨೬ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.

ವಿವಿಧ ರಾಜಕೀಯ ಪಕ್ಷಗಳ ಅಧಿಕೃತ ಏಜೆಂಟರು ಎಚ್ಚರ ವಹಿಸಬೇಕು ಎಂದರು.

ಈ ಸಂಧರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್‌, ಕಾಂಗ್ರೆಸ್‌ ಮುಖಂಡ ಉದಯ್‌ , ಜೆಡಿಎಸ್‌ ಮುಖಂಡ ಕಾಡಪ್ಪ, ಬಿಎಸ್‌ಪಿ ತಾಲೂಕು ಅಧ್ಯಕ್ಷ ವಿರೇಶ್‌ ಕಲ್ಗಣೆ , ತಹಶೀಲ್ದಾರ್‌ ಸುಪ್ರೀತಾ, ಚುನಾವಣೆ ಶಾಖೆಯ ತಹಶೀಲ್ದಾರ್‌ ಜನಾರ್ಧನ್‌ ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *