
ಆಲೂರು : ತಾಲ್ಲೂಕಿನ ಪಾಳ್ಯ ಹೋಬಳಿ ಹಳೇ ಕಾಮತಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕವಾಗಿ 6-7 ಜನರ ತಂಡ ಹಣವನ್ನು ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಆಟ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್ ಫೆಕ್ಟರ್ ಮೋಹನ್ ರೆಡ್ಡಿ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಪಣಕ್ಕಿಟ್ಟಿದ್ದ ಹಣ ಹಾಗೂ ಇತರೆ ವಸ್ತುಗಳನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲು ಮಾಡಲಾಗಿದೆ.
ಕಿರಣ ಎಂಬುವನು ಜೂಜಾಟದ ರೂವಾರಿಯಾಗಿದ್ದು ಎರಡು ಜನ ಪರಾರಿಯಾಗಿದ್ದನೆಂದು ತಿಳಿದು ಬಂದಿದೆ.
ಇನ್ನೂ ಈ ಜೂಜಾಟದಲ್ಲಿ ಕಿರಣ್ ಬಿನ್ ಲೆಟ್ ಯುವರಾಜ್ಮೋಹನ್ ಬಿನ್ ಲೇಟ್ ಶಿವಣ್ಣ ಮಂಜುನಾಥ್ ಬಿನ್ ದೇವೇಗೌಡ ಸಂಪತ್ ಕುಮಾರ್ ಬಿನ್ ಮಲ್ಲೇಶ್ ಈರಪ್ಪ ಬಿನ್ ರಾಜು ಗೋ ದರ್ಶನ್ ಬಿನ್ ಜಯಪ್ಪ ಈರೇಶ್ ಬಿನ್ ನಿಂಗಯ್ಯ ನವೀನ್ ಬಿನ್ ದೇರಪ್ಪ ವೆಂಕಟೇಶ್ ಬಿನ್ ತಿಮ್ಮಯ್ಯ ಜೂಜಾಟದಲ್ಲಿ ಬಾಗಿಯಾಗಿದ್ದು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ರೆಡ್ಡಿ ಪ್ರೊಫೆಷನಲ್ ಸಬ್ ಇನ್ಸ್ಪೆಕ್ಟರ್ ಕೌಶಿಕ್ ಹಾಗೂ ಸಿಬ್ಬಂದಿಗಳಾದ ಶಶಿಕುಮಾರ್ ,ಸುನಿಲ್ ,ಪೂರ್ಣೇಂದ್ರ ,ಹರೀಶ್, ಕಾಂತರಾಜು ಇದ್ದರು.
