
ಹಾನುಬಾಳು (ಸಕಲೇಶಪುರ ತಾ):* ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಸಕಲೇಶಪುರ ತಾಲ್ಲೂಕು, ಶೌರ್ಯ ವಿಪತ್ತು ನಿರ್ವಹಣಾ ಘಟಕ ದೇವಾಲಕೆರೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಕಲೇಶಪುರ ಇವರ ಸಹಭಾಗಿತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ, ಹಾನುಬಾಳು ಆವರಣದಲ್ಲಿ ಸಾಮಾಜಿಕ ಅರಣ್ಯಕರಣ ಕಾರ್ಯಕ್ರಮದಡಿಯಲ್ಲಿ ‘ಮಾವು ಫ್ರೂಟ್ ಜೋನ್’ ನಿರ್ಮಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಮಾವು, ಹಲಸು, ಸಪೋಟ, ಬಟರ್ ಫ್ರೂಟ್, ಜಂಬೂನೇರಳೆ, ಬೆಟ್ಟದ ನೆಲ್ಲಿಕಾಯಿ ಸೇರಿದಂತೆ ವಿವಿಧ ತಳಿಯ 250ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು.ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಸಂತೋಷ್ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾಲ್ಲೂಕು ಯೋಜನಾಧಿಕಾರಿ ಶ್ರೀ ರಾಜೇಶ್ ಎಂ ಅವರು, ಅಭಿವೃದ್ಧಿ ಹೆಸರಿನಲ್ಲಿ ಕಾಡುಗಳ ನಾಶವಾಗುತ್ತಿದ್ದು, ಕಾಲಕ್ಕೆ ತಕ್ಕಂತೆ ಮಳೆ-ಬೆಳೆ ಆಗುತ್ತಿಲ್ಲ. ಇದರ ಪರಿಣಾಮವಾಗಿ ಮಾನವ-ವನ್ಯಜೀವಿ ಸಂಘರ್ಷ ಉಂಟಾಗಿದೆ. ಕಾಡುಪ್ರಾಣಿಗಳಿಗೆ ಸಿಗಬೇಕಾದ ಹಣ್ಣು-ಹಂಪಲು ಕಾಡಿನಲ್ಲಿ ಸಿಗದ ಕಾರಣ ಆನೆ ಸೇರಿದಂತೆ ವನ್ಯಜೀವಿಗಳು ನಾಡಿಗೆ ಬರುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪೂಜ್ಯರ ಆಶಯದಂತೆ ಹಣ್ಣಿನ ಗಿಡಗಳನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಿಲಯದ ವಾರ್ಡನ್ ಶ್ರೀ ಸಂತೋಷ ಕುಮಾರ್, ಕೃಷಿ ಮೇಲ್ವಿಚಾರಕ ಪರಮೇಶ್ ಎಸ್, ವಲಯ ಮೇಲ್ವಿಚಾರಕಿ ಮೋಹಿನಿ, ಸೇವಾಪ್ರತಿನಿಧಿಗಳಾದ ಭವ್ಯ, ಲವೀನಾ, ಒಕ್ಕೂಟದ ಉಪಾಧ್ಯಕ್ಷ ಸಂದೇಶ್, ಕಾರ್ಯದರ್ಶಿ ವಿನುತಾ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ಪ್ರಸನ್ನ ಹಾಗೂ ಸದಸ್ಯರಾದ ಸುರೇಶ್ ಹೆಚ್.ಬಿ., ಸಂದೀಪ್, ಗಿರೀಶ್, ಶಶಿಕುಮಾರ್, ಅಕ್ಷಯ್, ಪ್ರವೀಣ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






