
ಹಾಸನ: ವಿಶ್ವ ಅಂಚೆ ದಿನದ ಅಂಗವಾಗಿ ರೋಟರಿ ಕ್ಲಬ್ ಆಫ್ ಹಾಸನ್ ಸನ್‌ರೈಸ್ ವತಿಯಿಂದ ಅಕ್ಟೋಬರ್ 9ರಂದು ನಗರದ ಮಲ್ಲಿಗೆ ಹೋಟೆಲ್‌ನಲ್ಲಿ ವಿಶ್ವ ಅಂಚೆ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಅಂಚೆ ಇಲಾಖೆಯ ಸಿಬ್ಬಂದಿಗಳಾದ ರಂಗಸ್ವಾಮಿ, ಸಂದೀಪ್, ಪ್ರವೀಣ್ ಶೆಟ್ಟಿ ಹಾಗೂ ಜಯೇಂದ್ರ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಭುವನೇಶ್ ಅವರು ವಿಶ್ವ ಅಂಚೆ ದಿನದ ಮಹತ್ವ ಹಾಗೂ ಜನಸಾಮಾನ್ಯರ ಜೀವನದಲ್ಲಿ ಅಂಚೆ ಇಲಾಖೆಯ ಪಾತ್ರದ ಕುರಿತು ವಿವರಿಸಿದರು.
ಕ್ಲಬ್ ಸದಸ್ಯೆ ಪ್ರೇಮಾ ಅವರು ಅಂಚೆ ಸಿಬ್ಬಂದಿಯ ಸೇವೆ, ಬದ್ಧತೆ ಮತ್ತು ಸಮಾಜಕ್ಕೆ ಅವರು ನೀಡುತ್ತಿರುವ ಕೊಡುಗೆಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ರೋಟರಿ ಕೆ.ಎಸ್. ಯೋಗೇಶ್ ಮಾತನಾಡಿ, ಅಂಚೆ ಸಿಬ್ಬಂದಿ ಪತ್ರಗಳು, ದಾಖಲೆಗಳು ಹಾಗೂ ಅಗತ್ಯ ಮಾಹಿತಿಯನ್ನು ಜನರಿಗೆ ತಲುಪಿಸುವ ಮೂಲಕ ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅವರ ನಿಷ್ಠೆ, ಪರಿಶ್ರಮ ಹಾಗೂ ಜನಸೇವೆಯನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಲಬ್ ಕಾರ್ಯದರ್ಶಿ ರೋಟರಿ ಬಿ.ಎಂ. ದರ್ಶನ್, ಮಾಜಿ ಅಧ್ಯಕ್ಷರಾದ ರೋಟರಿ ವಜ್ರ ಕುಮಾರ್, ರೋಟರಿ ಸಿದ್ದನಂಜಪ್ಪ, ರೋಟರಿ ಗುರುಮೂರ್ತಿ, ರೋಟರಿ ಭುವನೇಶ್, ರೋಟರಿ ಬೂದೇಶ್, ರೋಟರಿ ಮಲ್ಲಿಕಾರ್ಜುನ್ ಹಾಗೂ ಸದಸ್ಯೆ ಪ್ರೇಮಾ ಸೇರಿದಂತೆ ಕ್ಲಬ್‌ನ ಇತರ ಸದಸ್ಯರು ಉಪಸ್ಥಿತರಿದ್ದರು.
ಅಂಚೆ ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಗೌರವಿಸುವ ಮೂಲಕ ರೋಟರಿ ಕ್ಲಬ್ ಆಫ್ ಹಾಸನ್ ಸನ್‌ರೈಸ್ ತನ್ನ ಸಮಾಜಮುಖಿ ಕಾರ್ಯಗಳ ಬದ್ಧತೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ತಂಡದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
