
ಸಕಲೇಶಪುರ ಬಿಜೆಪಿಯ ಸಂಘಟನೆಯನ್ನು ಸರ್ವನಾಶ ಮಾಡಿದ ಬೇಲೂರಿನ ಚಂದ್ರಕಲಾ, ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಬಿಜೆಪಿ ಆಫೀಸ್ ನಲ್ಲಿ ತುಂಡುಗುಂಡು ಪಾರ್ಟಿ ಮಾಡಿ ಸಾಕ್ಷಿ ಸಮೇತ ಸಿಕ್ಕಿಬಿದ್ದಂತಹ ಮಾಜಿ ಅಧ್ಯಕ್ಷ ಮಂಜುನಾಥ ಸಂಗಿ ಹಾಗೂ ಹೆಬ್ಬನಹಳ್ಳಿ ಸಂದೇಶ್ ಇವರಿಬ್ಬರನ್ನು ಜೊತೆಯಲ್ಲಿಟ್ಟುಕೊಂಡು ಸುಮಾರು 3-4 ವರ್ಷ ಸಂಘಟನೆ ಮಾಡಿದಂತಹ ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿ ಸರ್ವಾಧಿಕಾರಿಗಳಂತೆ ನಡೆದುಕೊಳ್ಳುತ್ತಾ ಚುನಾವಣಾ ಸಂದರ್ಭದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿರುತ್ತಾರೆ. ಇದೇ ಮಂಜುನಾಥ್ ಸಾಂಗಿ ಹಾಗೂ ಹೆಬ್ಬನಹಳ್ಳಿ ಸಂದೇಶ್ ಇವರ ತಂಡದವರು ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ” ನೋಟ ಓಟು ” ಹಾಕುವ ಮುಖಾಂತರ ಬಿಜೆಪಿ ಅಭ್ಯರ್ಥಿಯಾದಂತ ನಾರ್ವೆ ಸೋಮಶೇಖರ್ ಅವರ ಸೋಲಿಗೆ ಪ್ರಮುಖ ಕಾರಣರಾಗಿರುತ್ತಾರೆ. ಮೈಸೂರು ವಿಭಾಗದ ಹಾಸನ ಜಿಲ್ಲೆಯ ಪ್ರಭಾರಿಗಳಾದಂತ ಮೈವಿ ರವಿಶಂಕರ್ ಅವರಲ್ಲಿ ನಮ್ಮದೊಂದು ಪ್ರಶ್ನೆ, ಮೂರ್ನಾಲ್ಕು ವರ್ಷ ಸಂಘಟನೆಯಲ್ಲಿ ತೊಡಗಿದಂತ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಚುನಾವಣಾ ಸಂದರ್ಭದಲ್ಲಿ ತಾವುಗಳು ಹಾಸನದ ಒಬ್ಬ ಎಣ್ಣೆ ಅಂಗಡಿ ಮಾಲೀಕರಾದ ಕ್ವಾಲಿಟಿ ಬಾರ್ ಶರತ್ ರವರಿಗೆ ಬಿಜೆಪಿ ಪಕ್ಷವನ್ನು ಗುತ್ತಿಗೆ ನೀಡಿರುತ್ತೀರಿ. ಮೂರ್ನಾಲ್ಕು ವರ್ಷ ಪಕ್ಷ ಸಂಘಟನೆಗೆ ಸಹಕಾರ ನೀಡಿದಂತಹ ಮಾಜಿ ಎಮ್ಎಲ್ಎ ಗಳಾದಂತಹ ಹೆಚ್ ಎಂ ವಿಶ್ವನಾಥ್ ಹಾಗೂ ಬಿ ಆರ್ ಗುರುದೇವ್ ಇವರುಗಳನ್ನು ಸಹ ಕಡೆಗಣಿಸಿರುತ್ತೀರಿ. ನಿಮ್ಮ ಸರ್ವಾಧಿಕಾರಧೋರಣೆಗೆ ಬೇಸತ್ತು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದಂತಹ ಎಸ್ ಸಿ ಸಮುದಾಯದ ಪರ್ವತಯ್ಯ ಅವರು ಕೂಡ ಪಕ್ಷವನ್ನು ತೊರೆದಿರುತ್ತಾರೆ. ಪ್ರಬಲವಾದ ಮೂರು ಸಮುದಾಯಗಳಾದ ಒಕ್ಕಲಿಗ ಮತ್ತು ವೀರಶೈವ ಹಾಗೂ ಎಸ್ ಸಿ ಸಮುದಾಯದ ನಾಯಕರನ್ನು ಕಡೆಗಣಿಸಿ ಹಾಸನದ ಬಾರ್ ಮಾಲೀಕರು ನೀಡಿದಂತಹ ನಿದರ್ಶನದಂತೆ ಚುನಾವಣೆಯನ್ನು ನಡೆಸುತ್ತಿದ್ದೀರಿ. ಇದೇನಾ ನಮ್ಮ ಬಿಜೆಪಿ ಸಂಸ್ಕೃತಿ ಸಕಲೇಶಪುರದ 26 ಪಂಚಾಯತಿ ಹಾಗೂ ಆಲೂರಿನ 22 ಪಂಚಾಯತಿ ಈ ಪಂಚಾಯಿತಿಗಳಿಗೆ ಬಾರ್ ಕ್ಲೀನರ್ ಗಳನ್ನು ಜವಾಬ್ದಾರಿ ಹಾಕಿದ್ದೀರಿ. ಎಲ್ಲಿ ಹೋಯ್ತು ನಮ್ಮ ಬಿಜೆಪಿ ಪಕ್ಷ ನಿಷ್ಠೆ. ಬಿಜೆಪಿ ರಾಜ್ಯಾಧ್ಯಕ್
