ಹಾಸನ : ಆಲೂರು ತಾಲ್ಲೂಕಿನ ಕಾಡ್ಲೂರು ಗ್ರಾಮದಲ್ಲಿ ಸುಮಾರು 360ಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿರುವ ಕುಟುಂಬಗಳು ವಾಸಿಸುತ್ತಿದ್ದು, ಈ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲದಿರುವುದು ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ.

ಪ್ರಸ್ತುತ ಪಡಿತರ ವಿತರಣೆಗಾಗಿ ಗ್ರಾಮಸ್ಥರು ಸುಮಾರು 5 ಕಿಲೋಮೀಟರ್ ದೂರದ ಪಕ್ಕದ ಗ್ರಾಮಕ್ಕೆ ತೆರಳಬೇಕಾದ ಅನಿವಾರ್ಯತೆ ಉಂಟಾಗಿದ್ದು ಇದರಿಂದ ಕೂಲಿ ಕಾರ್ಮಿಕರು ತಮ್ಮ ದಿನ ಕೆಲಸವನ್ನು ಬಿಟ್ಟು ಹೋಗಬೇಕಾಗಿದ್ದು, ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತಿದೆ. ವಿಶೇಷವಾಗಿ ವೃದ್ಧರು, ಮಹಿಳೆಯರು ಹಾಗೂ ದೈಹಿಕವಾಗಿ ಅಶಕ್ತರಾದವರು ಈ ದೂರ ಪ್ರಯಾಣದಿಂದ ಹೆಚ್ಚಿನ ಕಷ್ಟ ಅನುಭವಿಸುತ್ತಿದ್ದಾರೆ.

ಸರ್ಕಾರದ ಮಾರ್ಗಸೂಚಿಯ ಪ್ರಕಾರ ಪ್ರತಿ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ನ್ಯಾಯಬೆಲೆ ಅಂಗಡಿ ಇರಬೇಕೆಂಬ ಉದ್ದೇಶವಿದ್ದರೂ, ಕಾಡ್ಲೂರು ಕೊಪ್ಪಲ ಗ್ರಾಮಸ್ಥರು 5 ಕಿಲೋಮೀಟರ್ ದೂರ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆಹಾರ ಭದ್ರತಾ ಯೋಜನೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ.

ಸರಿ ಸುಮಾರು ಕಾಡ್ಲೂರು ಗ್ ಸುತ್ತಮುತ್ತ ಮುತ್ತಿಗೆ ಚಾಕನಹಳ್ಳಿ ಸೇರಿ 500 ಕ್ಕೂ ಹೆಚ್ಚು ಪಡಿತರ ಚೀಟಿ ಇರುವ ಹಿನ್ನೆಲೆಯಲ್ಲಿ,ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಹಾಗೂ ಗ್ರಾಮಸ್ಥರ ಪರವಾಗಿ ಮಾನ್ಯ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿ “ವಿಶೇಷ ಪ್ರಕರಣ” ಅಡಿಯಲ್ಲಿ ಕಾಡ್ಲೂರು ಕೊಪ್ಪಲ ಗ್ರಾಮಕ್ಕೆ ಹೊಸ ನ್ಯಾಯಬೆಲೆ ಅಂಗಡಿಯನ್ನು ಅಥವಾ ಉಪಕೇಂದ್ರವನ್ನು ಮಂಜೂರು ಮಾಡುವಂತೆ ಆಗ್ರಹಿಸಲಾಗಿದೆ.

ಸರ್ಕಾರ ತಕ್ಷಣ ಕ್ರಮ ಕೈಗೊಂಡು ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಕಾಡ್ಲೂರು ಬ್ರಾಂಚ್ ಅಧ್ಯಕ್ಷ ಮುನೀರ್, ಎಸ್ ಡಿಪೈ ಜಿಲ್ಲಾ ಕೋಶ ಅಧಿಕಾರಿ ಶಂಸುದ್ದೀನ್(ಪುತ್ತು), ಸಾವುಲ್ ಶರೀಫ್ ಯಾಸಿನ್ ಇಲಿಯಾಸ್ ನವಾಬ್ ಶರೀಫ್ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *