
ಬೇಲೂರು : ಪಟ್ಟಣದ ಲಕ್ಷ್ಮಿಪುರ ಬಡಾವಣೆಯ ಸಿ.ಕೆ.ಕೇಶವ ಅವರಿಗೆ ಸೇರಿದ ಗ್ರೀನ್ ಸಿಟಿ ಎಕೊ ಮೋಟಾರ್ಸ್ ಅವರಿಗೆ ಸೇರಿದ ಕಂಪನಿ ಎಲೆಕ್ಟ್ರಾನಿಕ್ ಸ್ಕೂಟಿಯನ್ನು ಸ್ನೇಹಿತರ ಮನೆ ಮುಂಭಾಗ ನಿಲ್ಲಿಸಿದ್ದರು.
ಆದರೆ ತಡರಾತ್ರಿ ಸಂಭವಿಸಿದ ಸ್ಕೂಟಿ ಅಗ್ನಿ ಅವಘಡವು ಸ್ಥಳೀಯರ ಎಚ್ಚರಿಕೆಯಿಂದ ದೊಡ್ಡ ದುರಂತವಾಗುವುದನ್ನು ತಪ್ಪಿಸಿದೆ.
ಸೋಮವಾರ ರಾತ್ರಿ ಸರಿಸುಮಾರು 11:30 ಗಂಟೆಯ ವೇಳೆಗೆ ಮನೆಯ ಮುಂದೆ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ಸ್ಕೂಟರ್ ಏಕಾಏಕಿ ಬೆಂಕಿಗೆ ಆಹುತಿಯಾಗಿದೆ.ಬೆಂಕಿ ಕಾಣಿಸಿಕೊಂಡ ತಕ್ಷಣ ಅಕ್ಕಪಕ್ಕದ ನಿವಾಸಿಗಳು ಎಚ್ಚರಗೊಂಡು ತಕ್ಷಣವೇ ಸ್ಥಳಕ್ಕೆ ಧಾವಿಸಿ ನೀರು ಹಾಗೂ ಇತರ ಉಪಕರಣಗಳ ಸಹಾಯದಿಂದ ಬೆಂಕಿಯನ್ನು ನಂದಿಸಲು ಮುಂದಾದರು.
ಅವರ ತ್ವರಿತ ಕ್ರಮದಿಂದ ಬೆಂಕಿ ವ್ಯಾಪಿಸದೇ ನಿಯಂತ್ರಣಕ್ಕೆ ಬಂದಿದ್ದು, ಸಮೀಪದ ಮನೆಗಳಿಗೆ ಯಾವುದೇ ಹಾನಿಯಾಗದೇ ದೊಡ್ಡ ಅನಾಹುತ ತಪ್ಪಿದೆ.
ಘಟನೆಯಿಂದ ಸ್ಕೂಟರ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಬೆಂಕಿ ಕಾಣಿಸಿಕೊಂಡ ಕಾರಣ ಸ್ಪಷ್ಟವಾಗಿಲ್ಲ. ಪ್ರಾಥಮಿಕವಾಗಿ ಬ್ಯಾಟರಿ ತೊಂದರೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಸ್ಥಳೀಯರು ಸಮಯೋಚಿತವಾಗಿ ಸ್ಪಂದಿಸಿ ಅಪಾಯವನ್ನು ತಡೆದಿರುವುದು ಗಮನಾರ್ಹವಾಗಿದೆ. ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆಯಿದೆ.
