ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಶಿವಮ್ಮ ಅವರಿಂದ ಭರ್ಜರಿ ಪ್ರಚಾರ.ಸಕಲೇಶಪುರ : ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಇಂದು ರಾತ್ರಿ ವೇಳೆಯಲ್ಲಿ ಕುಶಾಲನಗರ ಬಡಾವಣೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿ ಶಿವಮ್ಮ ರಾಜ್ಯದಲ್ಲಿ ಇರುವ ಮೂರು ಪಕ್ಷಗಳಿಗೂ ಜನರ ಬಳಿ ಓಟು ಕೇಳುವ ನೈತಿಕ ಹಕ್ಕಿಲ್ಲ 60 ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಜನರ ಮೂಲಭೂತ ಸಮಸ್ಯೆಗಳಾದ ಕುಡಿಯುವ ನೀರು ,ರಸ್ತೆ, ಉಚಿತ ಶಿಕ್ಷಣ ,ಉಚಿತ ಆರೋಗ್ಯ ನೀಡುವಲ್ಲಿ ವಿಫಲವಾಗಿದ್ದು ಜನರಿಗೆ ಮೋಸ ಮಾಡುತ್ತ ಬಂದಿದೆ ,ಇನ್ನೂ ಬಿಜೆಪಿ ಸರ್ಕಾರ ಡಾ.ಬಿ.ಆರ್ ಅಂಬೇಡ್ಕರ್ ಅವರು ನೀಡಿರುವ ಸಮ ಸಮಾಜದ ಪರಿಕಲ್ಪನೆಯ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಿದ್ದಾರೆ ಜೆಡಿಎಸ್ ಕೂಡ ರಾಜ್ಯದಲ್ಲಿ ಅಧಿಕಾರ ನಡೆಸಿದ್ದು ರೈತರ ಪಕ್ಷ ನಮ್ಮದು ಎಂದು ಹೇಳಿಕೊಂಡು ರೈತರಿಗೆ ಮೋಸ ಮಾಡುತ್ತ ಬಂದಿದ್ದು ಬಡವರ ಪರವಾಗಿ ನಿಜವಾದ ಕಾಳಜಿ ವಹಿಸಿ ಕೆಲಸ ಮಾಡುವ ಯಾವುದಾದರು ಒಂದು ಪಕ್ಷವಿದ್ದರೆ ಅದು ಬಹುಜನ ಸಮಾಜ ಪಕ್ಷ ಮಾತ್ರ ಎಲ್ಲರೂ ನನ್ನ ಗುರುತಾದ ಆನೆಯ ಗುರುತಿಗೆ ಮತ ನೀಡುವ ಮೂಲಕ ಜನತೆ ನನ್ನನ್ನು ಗೆಲ್ಲಿಸಬೇಕು ಎಂದರು.ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕೀರ್ತಿ, ವೀರೇಶ್, ಜಯವರ್ಧನ್ ,ರವಿ ,ಶಾಂತರಾಜು, ಪ್ರದಿಪ್, ಆಟೋ ಗುರು ಹಾಗೂ ಮಹಿಳಾ ಕಾರ್ಯಕರ್ತೆಯರು ಇದ್ದರು.

*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *