ಸಕಲೇಶಪುರ : ಪಟ್ಟಣದಲ್ಲಿ ಇಂದು ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ವತಿಯಿಂದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಹಾಗು ಆಕ್ಸಿಜನ್ ವ್ಯವಸ್ಥೆ ಯನ್ನು ಮಾಡಿಸಿ ಸಾರ್ವಜನಿಕರಿಗೆ ಉಪಯೋಗ ಪಡಿಸಿಕೊಡಬೇಕೆಂದು ಉಪವಿಭಾಗಧಿಕಾರಿಗಳಿಗೆ ಹಾಗು ತಾಲ್ಲೂಕು ಅರೋಗ್ಯಧಿಕಾರಿಗಳಿಗೆ ಮನವಿ ನೀಡಲಾಯಿತು.

ಸಕಲೇಶಪುರದ ಸರ್ಕಾರಿ ಆಸ್ಪತ್ರೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತವೆ ಇದರಿಂದ ಆಸ್ಪತ್ರೆಗೆ ದಾಖಲಾಗುವ ಹಾಗು ಹಳ್ಳಿಗಳಿಂದ ಬರುವ ರೋಗಿಗಳು ಇದೇ ಆಸ್ಪತ್ರೆಯನ್ನು ಅವಲಂಬಿಸಿಕೊಂಡಿರುತ್ತಾರೆ.

ಆದರೆ ಸ್ಕ್ಯಾನಿಂಗ್ ಹಾಗು ಆಕ್ಸಿಜನ್ ಇಲ್ಲದ ಕಾರಣ ವ್ಯದ್ಯರು ಪ್ರಥಮ ಚಿಕಿತ್ಸೆಯನ್ನು ಮಾಡಿ ಹಾಸನದ ಆಸ್ಪತ್ರೆಗೆ ಹೋಗಲು ತಿಳಿಸುತ್ತಾರೆ ಹಾಸನದ ಸರ್ಕಾರಿ ಆಸ್ಪತ್ರೆ ಅಲ್ಲಿಗೆ ಚಿಕಿತ್ಸೆ ಪಡೆಯಲು ಹೋಗುವವರು ಮಾರ್ಗ ಮದ್ಯದಲ್ಲಿಯೇ ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಂಡಿರುತ್ತಾರೆ ,ಇದಕ್ಕೆ ತಾಲ್ಲೂಕು ಆಡಳಿತ ಹಾಗು ಸರ್ಕಾರವೇ ನೇರ ಹೊಣೆಗಾರರಾಗುತ್ತಾರೆ.

ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲವಾದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ವತಿಯಿಂದ ಎಚ್ಚರಿಕೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜೀವನ್ ಗೌಡ. ತಾಲ್ಲೂಕು ಅಧ್ಯಕ್ಷ ವಿಜಯ್ ಕುಮಾರ್ , ಮಹಿಳಾ ಅಧ್ಯಕ್ಷರಾದ ಸಹನಾ ಪುನೀತ್ , ಗುಡಾನಕೆರೆ ವಿಜಯ್ ಕುಮಾರ್ , ಪ್ರಸನ್ನ ಬಾಳೆಗದ್ದೆ, ಜಗದೀಶ್, ಪ್ರಸನ್ನ ಬೈಕೆರೆ ಹಾಗು ಮಲ್ಲೇಶ್ ಪದಾಧಿಕಾರಿಗಳು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *