
ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ, ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ಹಾಗೂ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ‘ಕೃಷಿ ಪರ್ವ’ಎಂಬ ಹೆಸರಿನಲ್ಲಿ ಮಾಹಿತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಹೆಸರೇ ಹೇಳುವ ಹಾಗೆ ‘ಕೃಷಿ ಪರ್ವ’ ಅಂದರೆ ಬದಲಾವಣೆ ಹಬ್ಬವಾಗಿದ್ದು ಹಿರಿಸಮುದ್ರ ಗ್ರಾಮದೆಲ್ಲೆಡೆ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಇಷ್ಟು ದಿನಗಳ ಶಿಬಿರದಲ್ಲಿ ಅರಿತಿದ್ದ ರೈತರ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಬಿತ್ತಿ ಚಿತ್ರಗಳನ್ನು ತಯಾರಿಸಿ ಮಾಹಿತಿ ಕೇಂದ್ರದಲ್ಲಿ ಹಾಕಿದ್ದರು.
ಈ ವರ್ಷ ಅಂತರಾಷ್ಟ್ರೀಯ ಸಿರಿ ಧಾನ್ಯಗಳ ವರ್ಷವಾಗಿದ್ದು ಸಿರಿಧಾನ್ಯಗಳಿಗೆ ಹೆಚ್ಚು ಮಹತ್ವ ನೀಡಿದ್ದರು.ಸಿರಿಧಾನ್ಯಗಳ ಆರೋಗ್ಯ ಪ್ರಾಮುಖ್ಯತೆಯನ್ನು ಮನದಟ್ಟಾಗುವಂತೆ ತಿಳಿಸಿಕೊಟ್ಟರು.
ಇದಲ್ಲದೆ ಮಳೆ ನೀರು ಕೊಯ್ಲು, ಶೂನ್ಯ ಶಕ್ತಿ ತಂಪಾದ ಕೋಣೆ,ಸಮಗ್ರ ಕೃಷಿ ಪದ್ಧತಿ,ಇವುಗಳ ಮಾದರಿಯನ್ನು ತಯಾರಿಸಿ ಸುಲಭವಾಗಿ ಗ್ರಾಮೀಣ ಪ್ರದೇಶದಲ್ಲಿ ದೊರೆಯುವ ವಸ್ತುಗಳನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಯಾರಿಸುವುದು ಎಂಬುದನ್ನು ತಿಳಿಸಿಕೊಟ್ಟರು.
ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಎಸ್ ಎನ್ ವಾಸುದೇವನ್ ಡೀನ್ ಕೃಷಿ ಇವರು ಆಗಮಸಿ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಹಾಗೆಯೇ ಡಾ. ಶಂಕರ್ ಎಂ ಎಚ್ ಸಂಯೋಜಕರು ಕೃಷಿ ವಿಸ್ತರಣೆ, ಡಾ.ವಾಘಮೋರೆ ವಿಜಯ್ ಕುಮಾರ್ ವೀರಪ್ಪ ಸಹಾಯಕ ಪ್ರಾಧ್ಯಾಪಕರು ಕೃಷಿ ಸೂಕ್ಷ್ಮ ಜೀವಶಾಸ್ತ್ರ, ಡಾ. ನವೀನ್ ಕುಮಾರ್ ಪಿ ಸಹಾಯಕ ಪ್ರಾಧ್ಯಾಪಕರು ಕೃಷಿ ವಿಸ್ತರಣೆ, ಡಾ. ಮಂಜುನಾಥ್ ಹೆಚ್ ಸಹಾಯಕ ಪ್ರಾಧ್ಯಾಪಕರು ಸಸ್ಯ ರೋಗಶಾಸ್ತ್ರ, ಡಾ. ಅರವಿಂದ್ ಕುಮಾರ್ ಎಂ ಕೆ ಸಹಾಯಕ ಪ್ರಾಧ್ಯಾಪಕರು ಕೃಷಿ ಅರ್ಥಶಾಸ್ತ್ರ, ಶ್ರೀ ಶಿವಬಸಪ್ಪ ಕಂದುಕೂರ್ ಸಹಾಯಕ ಪ್ರಾಧ್ಯಾಪಕರು ಕೃಷಿ ತಂತ್ರಜ್ಞಾನ ವಿಭಾಗ ಇವರು ಆಗಮಿಸಿದ್ದರು.
