ಬೇಲೂರು : ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ,ವತಿಯಿಂದ ಬೇಲೂರು ಪುರಸಭೆ ಉಪಾಧ್ಯಕ್ಷರಾದ ಸೌಮ್ಯ ಇವರ ಅಧ್ಯಕ್ಷತೆಯಲ್ಲಿ ಮೆದುಳು ಜ್ವರ ಅಡ್ವಕಸಿ ಕಾರ್ಯಗಾರ ಹಾಗೂ ವಿಶ್ವರೇಬಿಸ್ ದಿನವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೀಟ ಶಾಸ್ತ್ರಜ್ಞರಾದ ರಾಜೇಶ್ ಕುಲಕರ್ಣಿ ಮಾತನಾಡಿ, ಮೆದುಳು ಜ್ವರವು ಸೋಂಕಿತ ಹಂದಿ ಅಥವಾ ಬೆಳ್ಳಕ್ಕಿ ಯನ್ನು ಕಚ್ಚಿದ ಸೊಳ್ಳೆಯು ಕಮಲ ಕಚ್ಚುವುದರಿಂದ ಆರೋಗ್ಯವಂತ ವ್ಯಕ್ತಿಗೆ ಮೆದುಳು ಜ್ವರವು ಬರುವುದು ಮುಂಜಾಗ್ರತ ಕ್ರಮಗಳಾದ ಮೆದುಳು ಜ್ವರಕ್ಕೆ ಸೊಳ್ಳೆಗಳನ್ನು ನಿಯಂತ್ರಿಸುವುದು, ಉತ್ಪತ್ತಿಯ ತಾಣಗಳನ್ನು ನಿರ್ಮೂಲನೆ ಮಾಡುವುದು ಮುಖ್ಯವೆಂದು ತಿಳಿಸಿದರು.

ಸೊಳ್ಳೆ ಕಚ್ಚುವಿಕೆಯಿಂದ ಪಾರಾಗಲು ಹಂದಿ ಸಾಕಾಣಿಕೆ ಗೂಡುಗಳಿಗೆ ಕೀಟನಾಶಕ ಸಿಂಪಡನೆ ಮಾಡುವುದು ಮತ್ತು ಸೊಳ್ಳೆ ನಿರೋಧಕ ಜಾಲರಿಯನ್ನು ಹಾಕುವುದು ಸಂಜೆ ವೇಳೆ ಮೈತುಂಬ ಬಟ್ಟೆ ಧರಿಸುವುದು ನಿಂತ ನೀರ್ನ ಸ್ಥಳಗಳಲ್ಲಿ ಲಾರ್ವಹಾರಿ ಮೀನು ಬಿಡುಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಉಷಾ,ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಮಂಗಳಮ್ಮ, BRC ಶಿವ ಮರಿಯಪ್ಪನವರು, ಮೇಲ್ವಿಚಾರಕಿ ತೇಜಸ್ವಿನಿ, ಪುರಸಭೆಯ ಆರೋಗ್ಯ ನಿರೀಕ್ಷೆಕಿ ಜ್ಯೋತಿಯವರು, PDO ರವರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖ್ಯೋಪಾಧ್ಯಾಯರು, ಆರೋಗ್ಯ ಇಲಾಖೆ ಸಿಬ್ಬಂದಿಯವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *