ಅರಕಲಗೂಡು: ಪಟ್ಟಣದ ಐತಿಹಾಸಿಕ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಷ್ಣು ದೀಪೋತ್ಸವವನ್ನು ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.

ದೇವಾಲಯದಲ್ಲಿ ಪೂಜೆ ನಡೆಸಿ ಅಲಂಕರಿಸಿದ ಉತ್ಸವ ಮೂರ್ತಿಗಳನ್ನು ರಥ ಬೀದಿಯಲ್ಲಿ ಮೆರವಣಿಗೆ ಮೂಲಕ ಉತ್ಸವ ನಡೆಸಲಾಯಿತು.ಬರುವ ಬೇಸಿಗೆಯ ದಿನಗಳಲ್ಲಿ ಯಾವುದೇ ಅಗ್ನಿ ಅನಾಹುತಗಳು ಊರಿನಲ್ಲಿ ಸಂಭವಿಸದಂತೆ ಪ್ರಾರ್ಥಿಸಿ ದೇವಾಲಯದ ಗೋಪುರದ ಮೇಲೆ ತುಪ್ಪದಲ್ಲಿ ನೆನೆಸಿದ ಬಟ್ಟೆಯ ವಸ್ತ್ರಕ್ಕೆ ಅಗ್ನಿ ಸ್ಪರ್ಶ ನಡೆಸಿ ರಕ್ಷೆ ವಿತರಿಸಲಾಯಿತು.

ಭಕ್ತರು ದೇವಾಲಯದಲ್ಲಿ ದೀಪಗಳನ್ನು ಬೆಳಗಿಸಿ ಸಂಭ್ರಮಿಸಿದರು. ಮಹಾಮಂಗಳಾರತಿ , ಪ್ರಸಾದ ವಿತರಣೆ ನಡೆಯಿತು. ಅರ್ಚಕ ರವೀಶ್ ಪೂಜಾಕಾರ್ಯ ನಡೆಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *