
ಚನ್ನರಾಯಪಟ್ಟಣ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಹೊಸಕೊಪ್ಪಲು ಗ್ರಾಮದಲ್ಲಿರುವ ಶ್ರೀ ಶಕ್ತಿ ಮಠದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ನೂತನ ಶಿಲಾಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಿತು,
ಈ ಕಾರ್ಯಕ್ರಮದಲ್ಲಿ ಹಲವಾರು ಗ್ರಾಮಗಳಿಂದ ಉತ್ಸವ ದೇವರನ್ನು ಕರಿಸಲಾಗಿತ್ತು ಎಂದು ಪರಮಪೂಜ್ಯ ಶ್ರೀ ಬಸವೇಶ್ವರ ಚೈತನ್ಯ ಮಹಾಸ್ವಾಮಿಜೀ ತಿಳಿಸಿದರು,
ಅಕ್ಕಪಕ್ಕದ ನೂರಾರು ಗ್ರಾಮಸ್ಥರು ಹಾಗೂ ಹೊರ ಜಿಲ್ಲೆಯ ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನ ಪಡೆದು ಸ್ವಾಮಿಗಳ ಆಶೀರ್ವಾದ ಪಡೆದರು,
ವೇದಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನಪ್ರಿಯ ಶಾಸಕ ಸಿ ಎನ್ ಬಾಲಕೃಷ್ಣರವರು ಹೊಸಕೊಪ್ಪಲು ಗ್ರಾಮದಲ್ಲಿ ನೂತನ ದೇವಾಲಯದ ಅಭಿವೃದ್ಧಿ ಮಾಡುವಲ್ಲಿ ಶಕ್ತಿ ಮಠದ ಸ್ವಾಮೀಜಿಯವರ ಪಾತ್ರ ಅತಿ ಹೆಚ್ಚು ಎಂದರು,
ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿಎನ್ ಬಾಲಕೃಷ್ಣ, ಚಿಕ್ಕನಾಯಕನಹಳ್ಳಿ ಶಾಸಕರಾದ ರಮೇಶ್ ಬಾಬು, ಹಾಸನ ಕ್ಷೇತ್ರದ ವಿಧಾನಪರಿಷತ್ ಶಾಸಕರಾದ ಸೂರಜ್ ರೇವಣ್ಣ, ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ಸಮಾಜ ಸೇವಕ ಎಸ್ಎಂ ರಮೇಶ್ ಉಪಸ್ಥಿತರಿದ್ದರು





