
ಆಲೂರು : ತಾಲೂಕಿನ ಕೆ ಹೊಸಕೋಟೆ ಹೋಬಳಿ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯ ವತಿಯಿಂದ ನಡೆಯುವ ಗಣಿತ ಮೆಟ್ರಿಕ್ ಮೇಳ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು 4,5,6,7, ನೇ ತರಗತಿ ಮಕ್ಕಳಿಗೆ ಗಣಿತ ಮೆಟ್ರಿಕ್ ಮೇಳ ಕಾರ್ಯಕ್ರಮವನ್ನು ತಾಲೂಕಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆ ಯೋಜನೆ ಮಾಡಲಾಗಿದೆ.
ಕಾರ್ಯಕ್ರಮದ ಮುಖ್ಯ ಉದ್ದೇಶ ಮಕ್ಕಳಿಗೆ ಗಣಿತವನ್ನು ಸರಳಗೊಳಿಸುವುದು ಮತ್ತು ಸುಲಲಿತವಾಗಿ ಮಕ್ಕಳು ಗಣಿತದ ಕಡೆ ಆಕರ್ಷಣೆಗೊಂಡು ಮಕ್ಕಳು ಗಣಿತವನ್ನು ಸುಲಭವಾಗಿ ಕಲಿಯಬೇಕು ಎನ್ನುವ ಉದ್ದೇಶದಿಂದ 3 ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡಿದ್ದೇವೆ.
ಅಕ್ಷರ ಫೌಂಡೇಶನ್ ವತಿಯಿಂದ ರಸಪ್ರಶ್ನೆ ಕಾರ್ಯಕ್ರಮ, ಗಣಿತದ ಸುಮಾರು 25 ಚಟುವಟಿಕೆಗಳಿಗೆ ಸಂಬಂಧಿಸಿದ ಸಾಹಿತ್ಯ ಸಿದ್ಧಪಡಿಸಿ ಒಂದು ತಿಂಗಳು ಎಲ್ಲಾ ಶಾಲೆಗಳಲ್ಲಿ ಗಣಿತ ಮಾಸಾಚಾರಣೆ ಕಾರ್ಯಕ್ರಮವನ್ನು ಮಾಡಿದ್ದೇವೆ. ಮಕ್ಕಳ ಬದುಕಿಗೆ ಬೇಕಾದಂತಹ ವ್ಯವಹಾರ ಜ್ಞಾನವನ್ನು ವೃದ್ಧಿಪಡಿಸಲು ಒಂದು ಮಕ್ಕಳಿಂದ ಒಂದು ಸಂತೆ ಆಯೋಜನೆ ಮಾಡಿದ್ದೇವೆ, ಇದರಿಂದ ಮಕ್ಕಳಿಗೆ ಲಾಭ ಮತ್ತು ನಷ್ಟದ ಅನುಭವವಾಗುತ್ತದೆ ಇದರ ಜೊತೆಗೆ ಮಕ್ಕಳಿಗೆ ಭಾಷಾ ಕೌಶಲ್ಯ ಅಭಿವೃದ್ಧಿಯಾಗುತ್ತದೆ.
ನಂತರ ಕೆ.ಹೊಸಕೋಟೆ ಕ್ಲಸ್ಟರ್ ಸಿ ಆರ್ ಪಿ ಮೈಮುನ ಮಾತನಾಡಿ ಮಲ್ಲಾಪುರ ಗ್ರಾಮ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಗಣಿತ ಮೆಟ್ರಿಕ್ ಮೇಳ ಕಾರ್ಯಕ್ರಮದಲ್ಲಿ ಕ್ವಿಜ್ ಮತ್ತು ರಸಪ್ರಶ್ನೆ ಕಾರ್ಯಕ್ರಮಕ್ಕೆ ಪಂಚಾಯತಿ ವ್ಯಾಪ್ತಿಯ ಸುಮಾರು 10 ಶಾಲೆಗಳಿಂದ 245 ಮಕ್ಕಳು ಭಾಗವಹಿಸಿದ್ದರು.
4,5,6, ನೇ ತರಗತಿಯ 190 ಮಕ್ಕಳಿಗೆ 2 ಕೊಠಡಿಗಳಲ್ಲಿ ಕ್ವಿಜ್, ನಂತರ 24 ಪರಿಕಲ್ಪನೆಗಳನ್ನು ಒಳಗೊಂಡಂತೆ 4 ಕೊಟ್ಟಡಿಗಳಲ್ಲಿ ಒಂದೊಂದು ಶಾಲೆಯಿಂದ ಮಾಡಿಕೊಂಡು ಬಂದಂತಹ ಪರಿಕಲ್ಪನೆಗಳನ್ನು ತಮ್ಮ ತಮ್ಮ ಗೆ ನಿಗದಿ ಪಡಿಸಿದ ಸ್ಥಳಗಳಲ್ಲಿ ಪ್ರಸ್ತುತಪಡಿಸಿದ್ದರು.
ಕಾರ್ಯಕ್ರಮದಲ್ಲಿ ಮಲ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹೇಮ ಲೋಕೇಶ್ ಉಪಾಧ್ಯಕ್ಷ ಕೃಷ್ಣಪ್ಪ , ಪಿ ಡಿ ಓ ಪರಮೇಶ್,ಬಿ ಆರ್ ಸಿ ರವಿ, ಇ ಸಿ ಓ ಮಂಜುಳಾ, ಡಯಟ್ ನ ಉಪನ್ಯಾಸಕ ಚಂದ್ರೇಗೌಡ,ಸಿ ಆರ್ ಪಿ ಮೈಮುನ, ಮುಖ್ಯ ಶಿಕ್ಷಕಿ ನಾಗರತ್ನ, ಮುಖ್ಯ ಅತಿಥಿ ನಜಮುನಿಸ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಮುರುಗೇಶ್, ಕೆ ಹೊಸಕೋಟೆ ಕ್ಲಸ್ಟರ್ ನ ಎಲ್ಲಾ ಮುಖ್ಯೋಪಾಧ್ಯಾಯರುಗಳು, ಗಣಿತ ಶಿಕ್ಷಕರುಗಳು, ಎಲ್ಲಾ ಶಾಲೆಗಳ ಎಸ್ ಡಿಎಂಸಿ ಅಧ್ಯಕ್ಷ ಮತ್ತು ಸದಸ್ಯರುಗಳು, ಮಕ್ಕಳ ಪೋಷಕರುಗಳು ಉಪಸ್ಥಿತರಿದ್ದರು.





