
ಸಕಲೇಶಪುರ : ಸಕಲೇಶಪುರ ಸಮೀಪ ನಡೆದ ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದಂತಹ ಅರ್ಜುನ ಕಾಡಾನೆ ದಾಳಿಗೆ ಮೃತಪಟ್ಟ ಹಿನ್ನಲೆ ಈಗಾಗಲೇ ಅರಣ್ಯ ಇಲಾಖೆ ಸಚಿವರಾದಂತಹ ಈಶ್ವರ್ ಖಂಡ್ರೆರವರು ಹಾಸನ ಮತ್ತು ಮೈಸೂರಲ್ಲಿ ಅರ್ಜುನನ ಸ್ಮಾರಕ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ.
ಅರ್ಜುನ ಮೂಲತಃ ಎಚ್.ಡಿ ಕೋಟೆ ಸಮೀಪದ ಬಳ್ಳೆ ಆನೆ ಶಿಬಿರದವನು. ಆತನ ಮೃತದೇಹವನ್ನು ಅಲ್ಲಿಗೆ ಕೊಂಡೊಯ್ಯಬೇಕು ಅನ್ನೋದು ಅರ್ಜುನನ ಮಾವುತನ ಬೇಡಿಕೆಯಾಗಿತ್ತು, ಅರ್ಜುನನನ್ನು ಕಳೆದ ಸುಮಾರು ವರ್ಷದಿಂದ ಮಾವುತನೇ ನೋಡಿಕೊಂಡಿದ್ದರಿಂದ ಹಾಗೆ ಅರ್ಜುನನ ನಂಬಿಕೊಂಡು ಆ ಕುಟುಂಬ ಜೀವನ ನಡೆಸುತ್ತಿತ್ತು ಹಾಗಾಗಿ ಆ ಮಾವುತನಿಗೆ ಅರಣ್ಯ ಇಲಾಖೆ ವತಿಯಿಂದ ಸೂಕ್ತ ಪರಿಹಾರ ಒದಗಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.
ಧರ್ಮ ಸಕಲೇಶಪುರ ಯುವ ಕಾಂಗ್ರೆಸ್ ಕಾರ್ಯದರ್ಶಿ.

