ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೇಕೆರೆ, ಹಾಸನ ಅಂತಿಮ ವರ್ಷದ ಬಿಎಸ್ಸಿ(ಹಾನ್ಸ್)‌,ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ನಿಯೋಜನೆಗೊಂಡ ತರಬೇತಿ ಕೇಂದ್ರ (ಎಬಿಐ),ಸಕಲೇಶಪುರದ ಹೆಗ್ಗಡೆ ಫಾರಂನಲ್ಲಿ(11) 25-01-2024 ರಂದು ಬಂದು ವಾಸ್ತವ್ಯ ಹೂಡಿದರು.

ಈ ತರಬೇತಿ ಕಾರ್ಯಕ್ರಮವು ಸುಮಾರು 15 ದಿನಗಳಿದ್ದು ಇಲ್ಲಿ ವಿದ್ಯಾರ್ಥಿಗಳು ಫಾರಂನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅತಿ ಮುಖ್ಯವಾಗಿ ಹೆಗ್ಗಡೆ ಫಾರಂನಲ್ಲಿ ಸಾವಯವ ಗೊಬ್ಬರದ ತಯಾರಿಕೆ ವಿಧಾನ ಮತ್ತು ಬಳಕೆಯ ಬಗ್ಗೆ ಹಾಗೂ ಮಾರಾಟದ ಬಗ್ಗೆ ಡಾ. ವಿಜಯ್‌ ಪ್ರಕಾಶ್‌ ಹೆಗ್ಗೆಡೆಯವರು ತಿಳಿಸಿದರು. ದಿನಾಂಕ 1-02-2024 ಗುರುವಾರದಂದು ವಿದ್ಯಾರ್ಥಿಗಳು ಯಸಳೂರಿನ ಸಂಬಾರ ಮಂಡಳಿಗೆ ಭೇಟಿ ನೀಡಿದರು.

ಇಲ್ಲಿನ ಮುಖ್ಯಸ್ಥರಾದ ಡಾ.ರಮೇಶ್‌ ನಾಯ್ಕ್‌ ರವರು ತಾವು ಬೆಳೆದ ವಾಣಿಜ್ಯ ಬೆಳೆಗಳಾದ ಏಲಕ್ಕಿ, ಕರಿಮೆಣಸು, ಬೆಳೆಗಳ ಬೇಸಾಯ ಕ್ರಮಗಳು, ಕೀಟ ರೋಗಗಳು ಮತ್ತು ಅವುಗಳ ಹತೋಟಿ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *