
ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಸಂವಿಧಾನ ಜಾಗೃತಿ ಜಾತ ಕಾರ್ಯಕ್ರಮ ವನ್ನು ಶ್ರೀಮತಿ ಕೆಂಚಮ್ಮ ಶ್ರೀ ಮಲ್ಲೇಗೌಡ ಕಲ್ಯಾಣ ಮಂಟಪ ಬಾಳ್ಳುಪೇಟೆಯಲ್ಲಿ ಏರ್ಪಡಿಸಲಾಗಿದ್ದು.
ಸಂವಿಧಾನ ಜಾತ ರಥ ಯಾತ್ರೆ ಬಾಳ್ಳುಪೇಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು, ಗ್ರಾಮ ಪಂಚಾಯತಿಯ ಅಧ್ಯಕ್ಷರು ಸಿಬ್ಬಂದಿ ವರ್ಗದವರು ಎಲ್ಲಾ ಸದಸ್ಯರುಗಳು, ಗ್ರಾಮದ ಮುಖಂಡರುಗಳ ಸಮ್ಮುಖದಲ್ಲಿ ಸಂವಿಧಾನ ಜಾಗೃತಿ ರಥ ಯಾತ್ರೆಯೊಂದಿಗೆ ಡೊಳ್ಳು ಕುಣಿತ ದೊಂದಿಗೆ ಅದ್ದೂರಿ ಯಾಗಿಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೌರಮ್ಮ ಅಧ್ಯಕ್ಷತೆ ವಹಿಸಿದ್ದರು,
ಕಾರ್ಯಕ್ರಮವನ್ನು ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಾದ ಆನಂದ್ ಮೂರ್ತಿ ಹಾಗೂ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ರಾಮಕೃಷ್ಣ, ಕೃಷಿ ಆಡಳಿತ ಅಧಿಕಾರಿಗಳಾದ ಪ್ರಕಾಶ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಹರೀಶ್, ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಸಂವಿಧಾನ ಪ್ರಸ್ತಾವನೆಯನ್ನು ವಿಸ್ತಾರವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಉಪನ್ಯಾಸಕರಾದ ಯತೀಶ್ ರವರಿಂದ ತಿಳಿಸಿಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಗ್ರಾಮದ ಮುಖಂಡರು, ಶಾಲೆ ಮಕ್ಕಳು ಗ್ರಾಮ ಪಂಚಾಯತಿಯ, ಅಧ್ಯಕ್ಷರಾದ ಗೌರಮ್ಮ, ಉಪಾಧ್ಯಕ್ಷರಾದ ಸ್ವಾಮಿ ,ಸದಸ್ಯರುಗಳಾದ ರಾಜೇಶ್, ರತ್ನ, ಪ್ರಕಾಶ್, ಕವಿತಾ, ಕೃಷ್ಣ, ಲೋಕೇಶ್, ಶಿಲ್ಪ, ರೋಹಿತ್, ಪ್ರೇಮಲತಾ, ಲತಾ, ಸಂಜು, ಭರತ್, ಶೋಭಾ, ಶಾಂತ, ಇತರೆ ಸದಸ್ಯರುಗಳು, ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸೋಮೇಗೌಡ, ಕಾರ್ಯದರ್ಶಿಗಳಾದ ಶೇಖರ್, ಗ್ರಾಮ ಪಂಚಾಯತಿ ಎಲ್ಲಾ ಸಿಬ್ಬಂದಿ ವರ್ಗದವರು, ವಿವಿಧ ಶಾಲೆಯ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು, ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.




