
ಹಾಸನ: ನಗರದ ತಣ್ಣೀರುಹಳ್ಳ ಬಳಿ ಹಾಲುಬಾಗಿಲು ರಸ್ತೆಯಲ್ಲಿರುವ ಹೊಯ್ಸಳ ಪಬ್ಲಿಕ್ ಶಾಲೆಯಲ್ಲಿ ನಡೆದ ಕ್ಯಾಂಟಿನ್ ಡೇ ಮತ್ತು ಮಕ್ಕಳ ಸಂತೆಯಲ್ಲಿ ಮಕ್ಕಳು ಭರ್ಜರಿ ವ್ಯಾಪಾರ ಮಾಡುವುದರ ಮೂಲಕ ಗಮನಸೆಳೆದರು.
ಹೊಯ್ಸಳ ಪಬ್ಲಿಕ್ ಶಾಲೆಯ ವ್ಯವಸ್ಥಾಪಕರಾದ ಶೋಭಾ ನಾಗರಾಜು ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕ್ಯಾಂಟಿನ್ ಡೇ ಮತ್ತು ಮಕ್ಕಳ ಸಂತೆಯನ್ನು ಪೋಷಕರಿಂದಲೇ ಉದ್ಘಾಟಿಸುವುದು ಕಾರ್ಯಕ್ರಮದ ವಿಶೇಷವಾಗಿತ್ತು. ಬಾಯಿ ಚಪ್ಪರಿಸುವ ವಿವಿಧ ರೀತಿಯ ಸಿಹಿ ತಿಂಡಿಗಳು, ನಾನಾ ರೀತಿಯ ತಂಪು ಪಾನಿಯಗಳು, ಕುರಕು ತಿಂಡಿಗಳು ಜೊತೆಗೆ ಅಡುಗೆ ಮಾಡುವ ತರಕಾರಿಗಳನ್ನು ತಂದು ಭರ್ಜರಿ ವ್ಯಾಪಾರ ಮಾಡಿದರು.
ಇಂತಹ ವ್ಯಾಪಾರ ಮಾಡುವುದರ ಮೂಲಕ ಲೆಕ್ಕಚಾರದ ಜ್ಞಾನವನ್ನು ವೃದ್ಧಿಸಲು ಸಹಕಾರಿಯಾಗಲಿ ಎನ್ನುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ಪೋಷಕರು ಸಂತೋಷವನ್ನು ವ್ಯಕ್ತಪಡಿಸಿದರು.
ಇದೆ ವೇಳೆ ಹೊಯ್ಸಳ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಎಂ.ಜೆ. ನವೀನ್ ಕುಮಾರ್ ಕೂಡ ಕ್ಯಾಂಟಿನ್ ಡೇ ಮತ್ತು ಮಕ್ಕಳ ಸಂತೆಯನ್ನು ಆಯೋಜಿಸಿರುವುದರ ಉದ್ದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.








