
ಬೇಲೂರು : ಗ್ರಾಮದೊಳಗೆ ಬೆಳ್ಳಂಬೆಳಗ್ಗೆ ಕಾಡಾನೆಯೊಂದು ಎಂಟ್ರಿಕೊಟ್ಟಿದ್ದು, ಗ್ರಾಮಸ್ಥರು ಜೀವ ಕೈಯಲ್ಲಿಡಿದು ಬದುವ ಸ್ಥಿತಿ ಎದುರಾಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದೊಳಗೆ ಬೆಳ್ಳಂಬೆಳಿಗ್ಗೆ ಒಂಟಿ ಸಲಗವೊಂದು ಬಂದಿದೆ.ಕಾಡಾನೆ ಕಂಡು ಗ್ರಾಮಸ್ಥರು ಭಯ ಭೀತರಾಗಿದ್ದಾರೆ.
ಇನ್ನು ಒಂಟಿ ಸಲಗ ಗ್ರಾಮದೊಳಗೆ ಹಾದು ಕಾಫಿತೋಟದತ್ತ ಹೋಗಿದೆ. ಕಾಡಾನೆ ಗ್ರಾಮದೊಳಗೆ ನಡೆದು ಹೋಗುವ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಇತ್ತೀಚಿಗೆ ಬೇಲೂರು ತಾಲೂಕಿನಲ್ಲೂ ಕಾಡಾನೆಗಳ ಹಾವಳಿ ಮಿತಿಮೀರಿದೆ. ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರು ಭಯಪಡುತ್ತಿದ್ದಾರೆ.
ಸ್ಥಳೀಯರು ಹೊಲ, ಗದ್ದೆ, ಕಾಫಿ ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಆದರು ಕೂಡ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದು, ಕೂಡಲೇ ಕಾಡಾನೆಯನ್ನು ಕಾಡಿಗಟ್ಟುವಂತೆ ಆಗ್ರಹಿಸಿದ್ದಾರೆ.
