
ಜಿಲ್ಲಾ ಆದಿ ದ್ರಾವಿಡ ತುಳು ಸಮಾಜ ಸೇವಾ ಸಂಘ ವತಿಯಿಂದ ಅನಿರ್ದಿಷ್ಟ ಅವಧಿ ಪ್ರತಿಭಟನೆ 5ನೇ ದಿನಕ್ಕೆ ಮುಂದುವರೆದಿದ್ದುಸಕಲೇಶಪುರ ತಾಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 241ರ ಸರ್ಕಾರಿ ಜಮೀನಿನಲ್ಲಿ ಆದಿ ದ್ರಾವಿಡ ತುಳು ಸಮುದಾಯದವರು ಗುಡಿಸಲು ನಿರ್ಮಿಸಿಕೊಂಡು ಮೂರು ವರ್ಷಗಳಿಂದ 22 ಕುಟುಂಬಗಳು ವಾಸವಾಗಿದ್ದು,
ಗ್ರಾಮ ಪಂಚಾಯತಿ ವತಿಯಿಂದ ಆದಿ ದ್ರಾವಿಡ ತುಳು ಸಮುದಾಯದವರು ಗುಡಿಸಲು ಹಾಕಿಕೊಂಡಿರುವ ಜಾಗಕ್ಕೆ ಸರ್ವೆ ನಡೆಸಿ ನಿವೇಶನಕ್ಕೆ ಹಕ್ಕು ಪತ್ರ ನೀಡಿರುವುದಿಲ್ಲ, ಕುಡಿಯುವ ನೀರು, ವಿದ್ಯುತ್, ಕಲ್ಪಿಸಿಕೊಡುವುದಾಗಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು,
ಮೂಲಭೂತ ಸೌಕರ್ಯ ಕಲ್ಪಿಸಿಕೊಡದೆ ಗ್ರಾಮ ಪಂಚಾಯಿತಿ ಪಿಡಿಒ ಗಿರೀಶ್ ನಿರ್ಲಕ್ಷ್ಯ ಮಾಡಿರುತ್ತಾರೆ. ಎಂದು ಆದಿ ದ್ರಾವಿಡ ತುಳು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಿ ಶಂಕರ್ ತಿಳಿಸಿದ್ದಾರೆ,
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆ ಬಗೆಹರಿಸುವವರೆಗೂ ಹೋರಾಟ ಮಾಡುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಮೈಸೂರು ವಿಭಾಗಿಯ ಸಂಚಾಲಕರಾದ ವೀರೇಶ್ ವಳಲಹಳ್ಳಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಮೋಹನ್ ಅಚ್ಚರಡಿ, ಹಾಲಪ್ಪ ಹಾಲೇಬೇಲೂರು ಇತರರು ಹಾಜರಿದ್ದರು.
