
ಆಲೂರು : ಹುಲ್ಲಹಳ್ಳಿ ಗ್ರಾಮದ ಸ.ನಂ.49 ರಲ್ಲಿರುವ 7-11 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನಿನಲ್ಲಿ 2-00 ಎಕರೆ ವಿಸ್ತೀರ್ಣದ ಜಮೀನನ್ನು ಮೊಗೇರ ಜನಾಂಗದವರ ಸ್ಮಶಾನಕ್ಕಾಗಿ ಮಂಜೂರು ಮಾಡಿಸಿಕೊಡುವಂತೆ ಇಂದು ಉಪವಿಭಾಗಾಧಿಕಾರಿಗಳಿಗೆ ಜಿಲ್ಲಾ ಮೋಗೇರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಆಲೂರು ತಾಲ್ಲೂಕು, ಪಾಳ್ಯ ಹೋಬಳಿ, ಹುಲ್ಲಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮೊಗೇರ ಜನಾಂಗದ 25 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು ಆದರೆ ಇಲ್ಲಿನ ನಿವಾಸಿಗಳು ಮೃತಪಟ್ಟ ಸಂದರ್ಭದಲ್ಲಿ ಶವಸಂಸ್ಕಾರ ಕಾರ್ಯವನ್ನು ಮಾಡಲು ಸ್ಮಶಾನ ಜಾಗ ಇಲ್ಲದ ಕಾರಣ, ಶವಸಂಸ್ಕಾರ ಕಾರ್ಯಕ್ಕೆ ತೊಡಕುಂಟಾಗಿರುತ್ತದೆ.
ಅಲ್ಲದೆ ದಿನಾಂಕ 29.02.2024ರಂದು ಮೃತಪಟ್ಟ ಗ್ರಾಮಸ್ಥರೊಬ್ಬರ ಶವಸಂಸ್ಕಾರ ನಡೆಸಲು ಸ್ಮಶಾನ ವಿಲ್ಲದ ಕಾರಣ, ಸ್ಥಳೀಯವಾಗಿ ಖಾಸಗಿ ವ್ಯಕ್ತಿಯ ಅನುಮತಿಯನ್ನು ಪಡೆದು, ಮೃತಪಟ್ಟ ವ್ಯಕ್ತಿಯ ದೇಹವನ್ನು ಸುಟ್ಟುಹಾಕಿರುತ್ತೇವೆ.ಆದುದರಿಂದ ಖಾವಂದರು ಹುಲ್ಲಹಳ್ಳಿ ಗ್ರಾಮದ ಸ.ನಂ.49 ರಲ್ಲಿ 7-11 ಎಕರೆಯಷ್ಟು ವಿಸ್ತೀರ್ಣದ ಸರ್ಕಾರಿ ಜಾಗ ಖಾಲಿ ಇದ್ದು, ಸದರಿ ಸರ್ಕಾರಿ ಜಾಗದಲ್ಲಿ 2- ೦೦ ಎಕರೆಯಷ್ಟು ವಿಸ್ತೀರ್ಣದ ಜಮೀನನ್ನು ಪರಿಶಿಷ್ಟ ಜಾತಿ ಮೊಗೇರ ಜನಾಂಗದವರ ಸ್ಮಶಾನಕ್ಕಾಗಿ ಮಂಜೂರು ಮಾಡಿಸಿಕೊಡುವಂತೆ ಮೊಗೇರ ಸಂಘದ ಪದಾಧಿಕಾರಿಗಳು ಎಸಿ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮೊಗೇರ ಸಂಘದ ಅದ್ಯಕ್ಷ ಕೇಶವ ಇತರೆ ಪದಾಧಿಕಾರಿಗಳು ಇದ್ದರು.
