ಸಕಲೇಶಪುರ : ಈ ದಿನ ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಕಚೇರಿ ಸಕಲೇಶಪುರದಲ್ಲಿ ರಾಜ್ಯಾಧ್ಯಕ್ಷರಾದ ಡಾಕ್ಟರ್ ಸಾಗರ್ ಜಾನಕೆರೆ ಅವರ ನೇತೃತ್ವದಲ್ಲಿ ಹಾಗೂ ತಾಲೂಕು ಅಧ್ಯಕ್ಷರಾದ ಪುಟ್ಟರಾಜ ಮಳಲಿ ಇವರ ಸಹಭಾಗಿತ್ವದಲ್ಲಿ ಸಕಲೇಶಪುರ ತಾಲೂಕು ವಿದ್ಯಾರ್ಥಿ ಘಟಕವನ್ನು ಉದ್ಘಾಟನೆ ಮಾಡಲಾಯಿತು.

ಉದ್ಘಾಟನೆ ಮಾಡಿ ಏಕಾಂತ್ ಅವರನ್ನು ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಸಾಗರ್ ಜಾನೆಕೆರೆಯವರು ಮಾತನಾಡಿ ಸಂಘಟನೆಯ ಬಗ್ಗೆ ತಿಳಿಸಿಕೊಟ್ಟರು

ಈ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿ ವಸಂತ್ ಕುಮಾರ್ ಸಕಲೇಶಪುರ ತಾಲೂಕು ಉಪಾಧ್ಯಕ್ಷರಾದ ತೇಜಸ್ ಗೌಡ ಸುಳ್ಳಕ್ಕಿ ನಗರ ಅಧ್ಯಕ್ಷರಾದ ನಾಗರಾಜ್ ಗೌಡ ಹಾಗೂ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿ ಮಹನೀಯರು ಸಂಘಟನೆಗೆ ಸೇರ್ಪಡೆಗೊಂಡರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *